ಪಾಕಿಸ್ತಾನ: ಆತ್ಮಹತ್ಯಾ ಸ್ಫೋಟಕ್ಕೆ 16 ಬಲಿ, 40 ಜನರಿಗೆ ಗಾಯ

7

ಪಾಕಿಸ್ತಾನ: ಆತ್ಮಹತ್ಯಾ ಸ್ಫೋಟಕ್ಕೆ 16 ಬಲಿ, 40 ಜನರಿಗೆ ಗಾಯ

Published:
Updated:

ಇಸ್ಲಾಮಾಬಾದ್ (ಪಿಟಿಐ):  ಸರ್ಕಾರಿ ಸೇನೆಯ ಕಚೇರಿಯೊಂದಕ್ಕೆ ಆತ್ಮಹತ್ಯಾ ಬಾಂಬರ್‌ನೊಬ್ಬ ಸ್ಫೋಟಕ ತುಂಬಿದ ವಾಹನವನ್ನು ನುಗ್ಗಿಸಿ ಸ್ಫೋಟಗೊಳಿಸಿದ ಪರಿಣಾಮ ಕನಿಷ್ಠ 16 ಜನ ಮೃತಪಟ್ಟು, 40ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ವಾಯವ್ಯ ಭಾಗದ ದರ್ ಆ್ಯಡಮ್ ಖೇಲ್ ಪ್ರಾಂತ್ಯದಲ್ಲಿ ಶನಿವಾರ ನಡೆದಿದೆ.

 

ದರ್ ಆ್ಯಡಮ್ ಖೇಲ್ ಪ್ರಾಂತ್ಯದ ಪ್ರಮುಖ ಮಾರುಕಟ್ಟೆಯಲ್ಲಿರುವ `ಅಮನ್ ಸಮೀತಿ~ ಹಾಗೂ ಸೇನೆ ಕಚೇರಿ ಎಂದು ಹೇಳಲಾಗುವ ಕಟ್ಟಡದಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುವ 16 ಜನರು ತಾಲಿಬಾನ್ ಉಗ್ರರರ ನಿಗ್ರಹಕ್ಕಾಗಿ ನಿಯಮಿಸಿದ ಸೇನೆಯ ಸದಸ್ಯರಾಗಿದ್ದು, ಗಾಯಗೊಂಡಿರುವವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ತೀವ್ರವಾಗಿ ಗಾಯಗೊಂಡಿರುವವರನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

ಇವರೆಗೆ ಐವರು ಚಿಂತಾಜನಕ ಸ್ಥಿತಿಯಲ್ಲಿರುವ ಗಾಯಾಳುಗಳು ಸೇರಿದಂತೆ ಆರು ಮೃತದೇಹಗಳು ಹಾಗೂ 22 ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಘಟನೆಯಲ್ಲಿ 20 ವ್ಯಾಪಾರಿ ಮಳಿಗೆಗಳು ಹಾಗೂ ಎಂಟು ಕಾರುಗಳು ಧ್ವಂಸಗೊಂಡಿದ್ದು, ಘಟನೆ ಕುರಿತಂತೆ ಇವರೆಗೆ ಯಾವುದೇ ಉಗ್ರರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇದನ್ನು ನಿಷೇಧಿತ ತೆಹ್ರಿಕ್ - ಇ - ತಾಲಿಬಾನ್ ಉಗ್ರರು ಮಾಡಿರುವ ಶಂಕೆ ವ್ಯಕ್ತವಾಗಿದೆ.ತಮ್ಮ ವಿರುದ್ಧ ಹೊಸದಾಗಿ ಸೇನಾ ಕಾರ್ಯಾಚರಣೆ ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂದು ಖೈಬರ್ ಪಕ್ತುಂವಾ ಮಾಹಿತಿ ಸಚಿವ ಮಿಯಾ ಇಫ್ತಿಕರ್ ಹುಸೇನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry