ಪಾಕಿಸ್ತಾನ ಚುನಾವಣೆ ಖರ್ಚು ಹೆಚ್ಚಳ ಪ್ರಸ್ತಾವ

7

ಪಾಕಿಸ್ತಾನ ಚುನಾವಣೆ ಖರ್ಚು ಹೆಚ್ಚಳ ಪ್ರಸ್ತಾವ

Published:
Updated:

ಇಸ್ಲಾಮಾಬಾದ್(ಐಎಎನ್‌ಎಸ್): ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚಗಳನ್ನು ನಾಲ್ಕು ಪಟ್ಟು ಹೆಚ್ಚಿಸಲು ಪಾಕಿಸ್ತಾನ ಚುನಾವಣಾ ಆಯೋಗವು ಪ್ರಸ್ತಾವವನ್ನು ಮುಂದಿಟ್ಟಿದೆ.ಕಳೆದ ದಶಕದಿಂದಲೂ ಸಂಸತ್ತಿಗೆ ಸ್ಪರ್ಧಿಸುವ ಅಭ್ಯರ್ಥಿಯೊಬ್ಬ 15 ಲಕ್ಷ ಮತ್ತು ಪ್ರಾಂತೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 10 ಲಕ್ಷ ರೂಪಾಯಿಗಳನ್ನು ಚುನಾವಣೆಗೆ ಖರ್ಚು ಮಾಡಲು ಅವಕಾಶವಿದೆ.ಈಗ ಆಯೋಗವು ಪ್ರಸ್ತಾಪಿಸಿರುವ ಪ್ರಕಾರ ಸಂಸತ್ತಿಗೆ ಸ್ಪರ್ಧಿಸುವ ಅಭ್ಯರ್ಥಿ 60 ಲಕ್ಷ ರೂಪಾಯಿ ಮತ್ತು ಪ್ರಾಂತೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 40 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಬಹುದು ಎಂದು `ಡಾನ್' ಪತ್ರಿಕೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry