ಮಂಗಳವಾರ, ಮೇ 11, 2021
21 °C

ಪಾಕಿಸ್ತಾನ ಜೈಲಿನ ಮೇಲೆ ತಾಲಿಬಾನಿಗಳ ದಾಳಿ: 400 ಕೈದಿಗಳು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್ಎಸ್): ಶಸ್ತ್ರಸಜ್ಜಿತ ತಾಲಿಬಾನ್ ಭಯೋತ್ಪಾದಕರು ಭಾನುವಾರ ಬೆಳಗಿನಜಾವ ಗ್ರಾನೇಡ್ ಹಾಗೂ ಗುಂಡಿನ ದಾಳಿ ನಡೆಸಿದ್ದು, 400 ಕೈದಿಗಳು ಪರಾರಿಯಾಗಿದ್ದಾರೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಕೆಂದ್ರ ಕಾರಾಗ್ರಹದ ಮೇಲೆ ರಾತ್ರಿ 1.30ರ ವೇಳೆಗೆ 100 ಭಯೋತ್ಪಾದಕರಿದ್ದ ತಂಡವು ದಾಳಿ ನಡೆಸಿತು. ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯೂ ಸೇರಿದಂತೆ 20 ಉಗ್ರ ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಮಾಹಿತಿ ಸಚಿವ ಇಫ್ತಿಕರ್ ಹುಸ್ಸೇನ್ ಹೇಳಿದ್ದಾರೆ ಎಂದು ಜಿಯೊ ಟಿವಿ ವರದಿ ಮಾಡಿದೆ.

ಭಯೋತ್ಪಾದರು ಮೊದಲು ಜೈಲಿನ ಮುಖ್ಯ ದ್ವಾರವನ್ನು ಗ್ರಾನೇಡ್ ಮೂಲಕ ಉಡ್ಡಾಯಿಸಿದರು. ನಂತರ ಭದ್ರತಾ ಸಿಬ್ಬಂದಿಯ ಮೇಲೆ ಸ್ವಯಂ ಚಾಲಿತ ಆಯುಧಗಳಿಂದ ದಾಳಿ ನಡೆಸಿದರು. ಜೈಲಿನ ಆರು ರಕ್ಷಣಾ ಬಾಗಿಲುಗಳನ್ನು ಅವುಗಳಿಗೆ ಹಾಕಲಾಗಿದ್ದ ಬೀಗವನ್ನು ಗುಂಡು ಹಾರಿಸಿ ಮುರಿದು ಒಳ ನುಗ್ಗಿದರು. ಆ ಸಂದರ್ಭದಲ್ಲಿ ಜೈಲಿನಲ್ಲಿ 944 ಕೈದಿಗಳು ಇದ್ದರು. ಅವರಲ್ಲಿ 384 ಕೈದಿಗಳು ಪರಾರಿಯಾಗಿದ್ದಾರೆ.

ಈ ದಾಳಿಯಲ್ಲಿ ಪೊಲೀಸರು ಸೇರಿದಂತೆ 25 ಮಂದಿಗೆ ಗಾಯವಾಗಿದೆ. ಈ ದಾಳಿ ತನ್ನದೇ ಎಂದು ತಾಲಿಬಾನ್ ಒಪ್ಪಿಕೊಂಡಿದೆ. ಪರಾರಿಯಾದವರ ಶೋಧ ಕಾರ್ಯದಲ್ಲಿ ಭದ್ರತಾ ಸಿಬ್ಬಂದಿ ನಿರತರಾಗಿದ್ದಾರೆ.

ಈ ನಡುವೆ ಪಾಕಿಸ್ತಾನದ ಕೇಂದ್ರ ಭಾಗದಲ್ಲಿರುವ ಪೇಷಾವರ ಕೇಂದ್ರ ಕಾರಾಗೃಹಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಈ ಜೈಲಿನಲ್ಲಿ 800 ಅಪರಾಧಿಗಳು ಹಾಗೂ 1200 ವಿಚಾರಣಾಧೀನ ಕೈದಿಗಳಿದ್ದಾರೆ. ಹೀಗಾಗಿ ಜೈಲಿನ ಸುತ್ತ 300 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.