ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ

7

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ

Published:
Updated:

ಮೆಲ್ಬರ್ನ್ (ಪಿಟಿಐ): ಪಾಕಿಸ್ತಾನ ‘ಭಯೋತ್ಪಾದನೆಯ ಕೇಂದ್ರ’ ಎಂದು ಬಣ್ಣಿಸಿದ ಭಾರತದ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ, ಮುಂಬೈ ದಾಳಿಯ ಆಪಾದಿತರನ್ನು ಶಿಕ್ಷಿಸುವಲ್ಲಿ ಪಾಕಿಸ್ತಾನ ಹಿಂದೇಟು ಹಾಕುತ್ತಿರುವುದಕ್ಕೆ ತೀವ್ರವಾಗಿ ಟೀಕಿಸಿದರು.‘ಭಯೋತ್ಪಾದನೆ ಮತ್ತುಭಯೋತ್ಪಾದಕರನ್ನು ಪಾಕಿಸ್ತಾನ ಪ್ರೋತ್ಸಾಹಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ನಮ್ಮ ಕಳವಳಕ್ಕಾದರೂ ಪಾಕಿಸ್ತಾನ ಕಿವಿಗೊಡಲೇ ಬೇಕು’ ಎಂದು ಅವರು ಹೇಳಿದರು.ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಇತ್ತೀಚೆಗೆ ಭಾರತದ ವಿರುದ್ಧವೇ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕೃಷ್ಣ ಅವರು ಈ ಅಭಿಪ್ರಾಯ ವ್ಯಕ್ತ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry