ಪಾಕಿಸ್ತಾನ ವೈದ್ಯನಿಗೆ ಅಮೆರಿಕ ಪೌರತ್ವ: ಕಾಂಗ್ರೆಸ್ಸಿಗರ ಆಗ್ರಹ

7

ಪಾಕಿಸ್ತಾನ ವೈದ್ಯನಿಗೆ ಅಮೆರಿಕ ಪೌರತ್ವ: ಕಾಂಗ್ರೆಸ್ಸಿಗರ ಆಗ್ರಹ

Published:
Updated:

ವಾಷಿಂಗ್ಟನ್ (ಪಿಟಿಐ): ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆಯಲ್ಲಿ ಸಿಐಎಗೆ ನೆರವು ನೀಡಿದ ಕಾರಣಕ್ಕಾಗಿ `ದೇಶದ್ರೋಹಿ ಆರೋಪ~ಕ್ಕೊಳಗಾಗಿ ಈಗ ಪಾಕಿಸ್ತಾನ ಜೈಲಿನಲ್ಲಿರುವ ವೈದ್ಯ ಡಾ. ಶಕೀಲ್ ಅಫ್ರಿದಿ ಅವರಿಗೆ ಅಮೆರಿಕದ ನಾಗರಿಕತ್ವ ನೀಡಬೇಕೆಂದು ಇಲ್ಲಿನ ಕಾಂಗ್ರೆಸ್ ಸಂಸದರ ಗುಂಪೊಂದು ಒತ್ತಾಯಿಸಿದೆ.ಈ ಪಾಕ್ ವೈದ್ಯನಿಗೆ ತಮ್ಮ ದೇಶದ ಪೌರತ್ವ ನೀಡುವಂತೆ ಸೂಚಿಸಿ ಅಮೆರಿಕ ಜನಪ್ರತಿನಿಧಿಗಳ ಸಭೆಯಲ್ಲಿ (ಕೆಳಮನೆ) ಮಸೂದೆಯೊಂದನ್ನು ಮಂಡಿಸಲಾಗಿದೆ ಎಂದು ಕಾಂಗ್ರೆಸ್ಸಿಗ ಡಾನಾ ರೊಹ್ರಾಬಚರ್ ತಿಳಿಸಿದ್ದಾರೆ.

ಈ ಮಸೂದೆಗೆ ಬಿಲ್ ಪೋಸಿ, ಟೆಡ್ ಪೋ, ರೋಸ್ಕೊ ಬಾರ್ಲೆಟ್ ಸೇರಿದಂತೆ ಡಜನ್‌ಗೂ ಅಧಿಕ ಸಂಸದರು ಸಹಿ ಹಾಕಿರುವುದಾಗಿ ತಿಳಿದುಬಂದಿದೆ.ಲಾಡೆನ್ ಕಾರ್ಯಾಚರಣೆಯಲ್ಲಿ ಡಾ. ಅಫ್ರಿದಿ ನೆರವಾದುದನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಿಯಾನ್ ಪನೆಟ್ಟಾ ಅವರು ಬಹಿರಂಗಪಡಿಸಿದ ನಂತರ ಈ ಒತ್ತಾಯ ಕೇಳಿಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry