ಪಾಕ್‌ಗೆ ಭಾರತಕ್ಕಿಂತ ಅಮೆರಿಕವೇ ದೊಡ್ಡ ಶತ್ರು: ಇಮ್ರಾನ್ ಖಾನ್

7

ಪಾಕ್‌ಗೆ ಭಾರತಕ್ಕಿಂತ ಅಮೆರಿಕವೇ ದೊಡ್ಡ ಶತ್ರು: ಇಮ್ರಾನ್ ಖಾನ್

Published:
Updated:

ನ್ಯೂಯಾರ್ಕ್ (ಪಿಟಿಐ): ಭಾರತಕ್ಕಿಂತಲೂ ಅಮೆರಿಕವೇ ತಮಗೆ ಬಹು ದೊಡ್ಡ ಶತ್ರು ಎಂದು ಪಾಕಿಸ್ತಾನೀಯರು ಭಾವಿಸುತ್ತಿರುವುದಾಗಿ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ವಿಶ್ಲೇಷಿಸಿದ್ದಾರೆ.ಇಲ್ಲಿನ ಕೊಲಂಬಿಯಾ ಪತ್ರಿಕೋದ್ಯಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕ ಅನುಸರಿಸುತ್ತಿರುವ ನೀತಿಗಳು ಪಾಕಿಸ್ತಾನದ ಜನತೆಯಲ್ಲಿ ಈಗ ತೀವ್ರ ಕಳವಳ ಉಂಟುಮಾಡಿವೆ.ಪಾಕಿಸ್ತಾನವು ಭಾರತದೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿದ್ದರು ಕೂಡಾ ಪಾಕ್ ಜನತೆಗೆ ಭಾರತೀಯರ ಮೇಲಿನ ಶತ್ರುತ್ವಕ್ಕಿಂತ ಅಮೆರಿಕದ ನಡೆಯೇ ಹೆಚ್ಚಿನ ಆತಂಕ ಸೃಷ್ಟಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಪಾಕ್‌ಗೆ ಭಾರತ ಅಪಾಯಕಾರಿ ದೇಶ ಅಲ್ಲವೇ ಅಲ್ಲ. ಎರಡೂ ದೇಶಗಳ ನಡುವೆ ಮನೆ ಮಾಡಿರುವ ಅಪನಂಬಿಕೆ ದೂರಾಗಬೇಕಿರುವುದೇ ಸದ್ಯದ ಅವಶ್ಯಕತೆ ಎಂದು ಬಣ್ಣಿಸಿದ್ದಾರೆ.ಭಾರತದಲ್ಲಿ ಯಾವುದೇ ಬಾಂಬ್ ದಾಳಿ ಅಥವಾ ಭಯೋತ್ಪಾದಕರ ಕೃತ್ಯ ನಡೆದರೂ ಅಮೆರಿಕ ಮತ್ತು ಯುರೋಪ್ ದೇಶಗಳು ತಕ್ಷಣವೇ ಪಾಕಿಸ್ತಾನದತ್ತಲೇ ಮುಖ ಮಾಡುವಂತಹ ಸ್ಥಿತಿ ನನ್ನನ್ನು ಸ್ತಂಭೀಭೂತನನ್ನಾಗಿಸುತ್ತದೆ ಎಂದು ಇಮ್ರಾನ್ ಕಳವಳ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry