ಪಾಕ್‌ಗೆ ಯೂನಿಸ್‌, ಮಿಸ್ಬಾ ಆಸರೆ

7

ಪಾಕ್‌ಗೆ ಯೂನಿಸ್‌, ಮಿಸ್ಬಾ ಆಸರೆ

Published:
Updated:

ಅಬುಧಾಬಿ (ಎಎಫ್‌ಪಿ): ಯೂನಿಸ್‌ ಖಾನ್‌ ಹಾಗೂ ನಾಯಕ ಮಿಸ್ಬಾ ಉಲ್‌ ಹಕ್‌ ಅವರ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ಎದುರಿನ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆರಂಭಿಕ ಅಪಾಯದಿಂದ ಪಾರಾಗಿದ್ದಾರೆ.

ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 223 ರನ್‌ಗಳ ಹಿನ್ನಡೆ ಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿ ಸಿರುವ ಪಾಕ್‌ ಮೂರನೇ ದಿನದಾಟದ ಅಂತ್ಯಕ್ಕೆ 49 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿಸಿದೆ. ಇನ್ನೂ 91ರನ್‌ಗಳ ಹಿನ್ನಡೆ ಹೊಂದಿದೆ.ಎರಡನೇ ಇನಿಂಗ್ಸ್‌ ಆರಂಭಿಸಿದ ಪಾಕ್‌ 19 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜೊತೆಗೂಡಿದ್ದು ಯೂನಿಸ್‌ ಹಾಗೂ ಮಿಸ್ಬಾ. ಇವರು ಮುರಿಯದ ನಾಲ್ಕನೇ ವಿಕೆಟ್‌ಗೆ  113 ರನ್‌ ಸೇರಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: ಮೊದಲ ಇನಿಂಗ್ಸ್‌ 63.5 ಓವರ್‌ಗಳಲ್ಲಿ 165 ಹಾಗೂ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 132 (ಯೂನಿಸ್‌ ಖಾನ್‌ ಬ್ಯಾಟಿಂಗ್‌ 62, ಮಿಸ್ಬಾ ಉಲ್‌ ಹಕ್‌ ಬ್ಯಾಟಿಂಗ್‌ 53; ನುವಾನ್‌ ಪ್ರದೀಪ್‌ 28ಕ್ಕೆ2); ಶ್ರೀಲಂಕಾ: ಮೊದಲ ಇನಿಂಗ್ಸ್‌ 134 ಓವರ್‌ಗಳಲ್ಲಿ 388 (ಮಾಹೇಲ ಜಯವರ್ಧನೆ 129, ಏಂಜೆಲೊ ಮ್ಯಾಥ್ಯೂಸ್‌  42; ಜುನೈದ್‌ ಖಾನ್‌ 102ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry