ಬುಧವಾರ, ಮಾರ್ಚ್ 3, 2021
22 °C
ಮುಂದಿನ ವಾರ ಸಾರ್ಕ್‌ ಸಭೆ

ಪಾಕ್‌ಗೆ ಹೋಗದಂತೆ ಜೇಟ್ಲಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್‌ಗೆ ಹೋಗದಂತೆ ಜೇಟ್ಲಿಗೆ ಸೂಚನೆ

ನವದೆಹಲಿ: ಮುಂದಿನ ವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್‌ ಹಣಕಾಸು ಸಚಿವರ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಭಾಗವಹಿಸುವುದಿಲ್ಲ.ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದಲ್ಲಿ ಸಾರ್ಕ್‌ ಗೃಹ ಸಚಿವರ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಅನುಭವ ಹಿತಕರವಾಗಿರಲಿಲ್ಲ. ಹಾಗಾಗಿ ಹಣಕಾಸು ಸಚಿವರ ಸಭೆಯಲ್ಲಿ ಜೇಟ್ಲಿ ಭಾಗವಹಿಸುವುದು ಬೇಡ ಎಂಬ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿದ್ದಾರೆ.ಹಣಕಾಸು ಸಚಿವಾಲಯದಲ್ಲಿ ಹಣಕಾಸು ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಶಕ್ತಿಕಾಂತ ದಾಸ್‌ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಾರ್ಕ್‌ ಹಣಕಾಸು ಸಚಿವರ ಸಭೆ ಇದೇ 25 ಮತ್ತು 26ರಂದು ನಡೆಯಲಿದೆ.ಪಾಕ್‌ಗೆ ಹೋಗುವುದು ನರಕಕ್ಕೆ ಹೋದಂತೆ: ಈ ಮಧ್ಯೆ, ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದು, ‘ಪಾಕಿಸ್ತಾನಕ್ಕೆ ಹೋಗುವುದು ಎಂದರೆ ನರಕಕ್ಕೆ ಹೋದಂತೆ’ ಎಂದು ಹೇಳಿದ್ದಾರೆ.ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದ ಜನರೇ ಸಾಯುತ್ತಿದ್ದಾರೆ. ಹಾಗಿದ್ದರೂ ಆ ದೇಶ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಈ ಬೆಂಬಲದ ಪರಿಣಾಮವನ್ನು ಅವರು ಈಗ ಅನುಭವಿಸುತ್ತಿದ್ದಾರೆ ಎಂದು ಹರಿಯಾಣದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಪರಿಕ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತ–ಪಾಕಿಸ್ತಾನ ನಡುವಣ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.