ಪಾಕ್‌ನಲ್ಲಿ ಉಗ್ರರ ದಾಳಿ: 20 ಸಾವು

7

ಪಾಕ್‌ನಲ್ಲಿ ಉಗ್ರರ ದಾಳಿ: 20 ಸಾವು

Published:
Updated:
ಪಾಕ್‌ನಲ್ಲಿ ಉಗ್ರರ ದಾಳಿ: 20 ಸಾವು

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಖೈಬರ್ ಕಣಿವೆಯಲ್ಲಿ ತಾಲಿಬಾನ್ ಉಗ್ರರು ಮತ್ತು ಪಾಕ್ ಸೈನಿಕರು ನಡುವೆ ನಡೆದ ಗುಂಡಿನ ದಾಳಿಯಲ್ಲಿ ಉಗ್ರರು ಮತ್ತು  ಸೈನಿಕರು ಸೇರಿದಂತೆ 20 ಜನರು ಮೃತ ಪಟ್ಟಿದ್ದಾರೆ.ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ತಾಲಿಬಾನ್ ಉಗ್ರರು ಪಾಕ್ ಸೈನಿಕರ ಮೇಲೆ ಗುಂಡಿನ ಮತ್ತು ಶೆಲ್ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿ ದಾಳಿ ನಡೆಸಿದ ಸೈನಿಕರು 12 ಜನ ಉಗ್ರರನ್ನು ಕೊಂದು ಹಾಕಿದ್ದಾರೆ.  ಘಟನೆಯಲ್ಲಿ 8 ಸೈನಿಕರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಇಲ್ಲಿನ ಸರ್ಕಾರಿ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry