ಪಾಕ್‌ನಲ್ಲಿ ಬಸ್ ಸ್ಫೋಟ: 18 ಸಾವು

7

ಪಾಕ್‌ನಲ್ಲಿ ಬಸ್ ಸ್ಫೋಟ: 18 ಸಾವು

Published:
Updated:

ಪೆಶಾವರ (ಪಿಟಿಐ): ಪಾಕಿಸ್ತಾನದ ವಾಯವ್ಯ ಭಾಗದ ಖೈಬರ್- ಪಖ್ತುನ್‌ಖ್ವಾ ಪ್ರಾಂತ್ಯದ ಪ್ರಮುಖ ಪಟ್ಟಣವಾದ  ಹಂಗು ಸಮೀಪದ ಅಲಿಜೈ ಜೊಜಾರ ಎಂಬಲ್ಲಿ ಸೋಮವಾರ ಮಿನಿ ಬಸ್ಸೊಂದರಲ್ಲಿ ಶಕ್ತಿಶಾಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ  18 ಮಂದಿ ಸತ್ತು ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ಅಬ್ದುರ್ ರಶೀದ್ ತಿಳಿಸಿದ್ದರೂ, ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿಲ್ಲ. ಬಾಂಬರ್ ಬಸ್ಸಿನೊಳಗೆ ಇದ್ದಿರುವ ಸಾಧ್ಯತೆ ಇದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry