ಪಾಕ್‌: ಕಯಾನಿ ನಂತರ ಯಾರು?

7

ಪಾಕ್‌: ಕಯಾನಿ ನಂತರ ಯಾರು?

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ಅಷ್ಫಾಕ್‌ ಪರ್ವೇಜ್‌ ಕಯಾನಿ ಅವರ ಅಧಿಕಾರಾವಧಿ ನವೆಂಬರ್‌ ತಿಂಗಳಿಗೆ ಕೊನೆಯಾಗು ತ್ತಿದ್ದು, ಮುಂದಿನ ಮುಖ್ಯಸ್ಥರು ಯಾರು ಎಂಬುದರ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.ಅಭದ್ರತೆ ಹಾಗೂ ಸರ್ಕಾರ ರಚನೆಯಲ್ಲಿ ಪಾಕ್‌ ಸೇನೆ ಪಾತ್ರ ಮಹತ್ತರವಾಗಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರ ನೇಮಕದ ಕಡೆ ಎಲ್ಲರ ದೃಷ್ಟಿ ಬಿದ್ದಿದೆ. ಹಲವರ ಹೆಸರುಗಳು ನೂತನ ಹುದ್ದೆಗೆ ಕೇಳಿಬರುತ್ತಿದ್ದು, ಈ ಪೈಕಿ ಲೆಫ್ಟಿನೆಂಟ್‌ ಜನರಲ್‌ ಹರೂನ್‌ ಅಸ್ಲಮ್‌ ಅವರು ಮುಂಚೂಣಿ ಯಲ್ಲಿದ್ದಾರೆ. ಸೇನೆಯಲ್ಲಿ ಕಯಾನಿ ಬಿಟ್ಟರೆ ಅಸ್ಲಮ್‌ ಅವರೇ ಹಿರಿಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry