ಪಾಕ್‌ ಚರ್ಚ್‌ ಸ್ಫೋಟ: 78 ಬಲಿ

7

ಪಾಕ್‌ ಚರ್ಚ್‌ ಸ್ಫೋಟ: 78 ಬಲಿ

Published:
Updated:

ಪೆಶಾವರ (ಪಿಟಿಐ): ಪಾಕಿಸ್ತಾನದ ಪೆಶಾವರದ ಐತಿಹಾಸಿಕ ಆಲ್‌ ಸೇಂಟ್ಸ್  ಚರ್ಚ್‌ನಲ್ಲಿ ಭಾನುವಾರ ಇಬ್ಬರು ಆತ್ಮಹತ್ಯಾ ದಾಳಿಕೋರರು ಸ್ಫೋಟಿಸಿಕೊಂಡ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ಸೇರಿ  78 ಮಂದಿ ಸತ್ತಿದ್ದಾರೆ.ಈ ಸಮಯದಲ್ಲಿ ಚರ್ಚ್‌ ಒಳಗೆ  600- 700 ಮಂದಿ ಇದ್ದರು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಕಟ್ಟಡಗಳು ಜಖಂಗೊಂಡಿವೆ.ಪ್ರಾರ್ಥನೆ ಮುಗಿಸಿಕೊಂಡು ಹೊರ ಬರುತ್ತಿದ್ದ  ಜನರನ್ನು ಗುರಿಯಾಗಿಸಿ ಕೊಂಡು  ದುಷ್ಕರ್ಮಿಗಳು   ದಾಳಿ ನಡೆಸಿದ್ದಾಗಿ ಪೆಶಾವರದ ಪೊಲೀಸ್‌ ಆಯುಕ್ತ ಶಹಿಬ್‌ಜದಾ ಮುಹಮ್ಮದ್‌  ಅನಿಸ್‌ ತಿಳಿಸಿದ್ದಾರೆ.  ‘78 ಮಂದಿ ಮೃತಪಟ್ಟಿದ್ದು, 130 ಜನರು ಗಾಯಗೊಂಡಿದ್ದಾರೆ’ ಎಂದು ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿ ಶಫ್ತಕ್‌ ಖಚಿತಪಡಿಸಿದ್ದಾರೆ.ಮಾರುಕಟ್ಟೆ ಹಾಗೂ ಶಾಪಿಂಗ್‌ ಮಳಿಗೆಗಳು ಇರುವ ಜನನಿಬಿಡ ಸ್ಥಳ ದಲ್ಲಿಯೇ ಈ ಚರ್ಚ್‌ ಇದೆ.  ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ.ಪ್ರಧಾನಿ ಖಂಡನೆ: ಪ್ರಧಾನಿ ನವಾಜ್‌ ಷರೀಫ್‌ ಅವರು ಈ ದಾಳಿಯನ್ನು ಖಂಡಿಸಿದ್ದಾರೆ. ‘ಭಯೋತ್ಪಾದಕರಿಗೆ ಯಾವುದೇ ಧರ್ಮ ಲೆಕ್ಕಕ್ಕೆ ಬರುವುದಿಲ್ಲ. ಅವರು ಮುಗ್ಧರನ್ನು ಗುರಿಯಾಗಿಸಿ ಕೊಂಡು ದಾಳಿ ಮಾಡುತ್ತಾರೆ. ಇದು ಇಸ್ಲಾಂಗೆ ವಿರುದ್ಧ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry