ಪಾಕ್‌ ನ್ಯಾಯಾಂಗ ಆಯೋಗ ಭೇಟಿ ವಿಳಂಬ

7

ಪಾಕ್‌ ನ್ಯಾಯಾಂಗ ಆಯೋಗ ಭೇಟಿ ವಿಳಂಬ

Published:
Updated:

ಇಸ್ಲಾಮಾಬಾದ್ / ಲಾಹೋರ್‌ (ಪಿಟಿಐ): ಮುಂಬೈ ದಾಳಿ ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೆಸಲು ಬುಧವಾರ (ಸೆ.11) ಭಾರತಕ್ಕೆ ತೆರಳಬೇಕಿದ್ದ ಪಾಕ್‌ ನ್ಯಾಯಾಂಗ ಆಯೋಗದ ಮಹತ್ವದ ಭೇಟಿಯು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕನಿಷ್ಠ 10 ದಿನಕ್ಕೆ ಮುಂದಕ್ಕೆ ಹೋಗಿದೆ.‘ಗಣೇಶ ಹಬ್ಬದ ಪ್ರಯುಕ್ತ ಮುಂಬೈನಲಿ್ಲ ನ್ಯಾಯಾ­ಲಯಗಳಿಗೆ ರಜೆ ಇರುವುದರಿಂದ ಈಗ ಸಾಕ್ಷಿಗಳನ್ನು  ವಿಚಾ­ರಣೆಗೆ ಒಳಪಡಿಸಲು ಆಗದು ಎಂದು ಭಾರತ ಸರ್ಕಾರ ತಿಳಿಸಿದ್ದು, ಭೇಟಿಯನು್ನ ಮುಂದೂಡುವಂತೆ ಸೂಚಿಸಿದೆ’ ಎಂದು ಆರೋಪಿಗಳ ಪರ ವಕೀಲ ರಿಯಾಜ್‌ ಅಕ್ರಮ್‌ ಚೀಮಾ ತಿಳಿಸಿದಾ್ದರೆ.

ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾರಣೆ ವೇಳೆ ರಿಯಾಜ್‌ ಈ ವಿಷಯವನು್ನ ಕೋರ್ಟ್‌ನಲಿ್ಲ ತಿಳಿಸಿದರು.ನಾ್ಯಯಾಂಗದ ಮುಂದಿನ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬಹುಶಃ ಇನ್ನೊಂದು ವಾರದಲಿ್ಲ ಹೊಸ ದಿನಾಂಕ ನಿಗದಿಯಾಗಬಹುದು ಎನ್ನಲಾಗಿದೆ.

ಆಯೋಗದ ಭಾರತ ಭೇಟಿಯು ಈ ತಿಂಗಳಲಿ್ಲ ಎರಡು ಸಲ ಮುಂದೂಡಿಕೆಯಾದಂತೆ ಆಗಿದೆ. ಭಾರತವು ಈ ಮುಂಚೆ ನೀಡಿದ್ದ ದಿನಾಂಕದ ಪ್ರಕಾರ, ಸೆಪ್ಟೆಂಬರ್‌ ಮೊದಲ ವಾರದಲ್ಲೇ ಆಯೋಗದ ಸದಸ್ಯರು ಅಲಿ್ಲಗೆ ತೆರಳಬೇಕಿತ್ತು. ಆದರೆ ಅಂತರರಾಷ್ಟ್ರೀಯ ವಿಮಾನದ ರದ್ದತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಸೆ.7ರಂದು ಭೇಟಿ ನಿಗದಿಯಾಗಿತ್ತು. ಅಂದು ಪುನಃ ವಿಮಾನ ರದಾ್ದಗಿದ್ದರಿಂದ ಭೇಟಿಯು ರದಾ್ದಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry