ಪಾಕ್‌ ಭೂಕಂಪ:ಸಾವಿನ ಸಂಖ್ಯೆ 350 ಕ್ಕೆ ಏರಿಕೆ

7

ಪಾಕ್‌ ಭೂಕಂಪ:ಸಾವಿನ ಸಂಖ್ಯೆ 350 ಕ್ಕೆ ಏರಿಕೆ

Published:
Updated:

ಇಸ್ಲಾಮಾಬಾದ್‌ (ಪಿಟಿಐ/ಐಎಎನ್‌­ಎಸ್‌): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಬುಧ­ವಾರ 350ಕ್ಕೆ ಏರಿದೆ.400 ಜನರು ಗಾಯ­ಗೊಂಡಿ­ದ್ದಾರೆ. ಅವಶೇಷ­ಗಳಡಿ ಬದು­ಕು­ಳಿದವರನ್ನು ಕಾಪಾಡಲು ಸೇನೆ ಮತ್ತು ರಕ್ಷಣಾ ಕಾರ್ಯಕರ್ತರು ಶ್ರಮಿಸು­ತ್ತಿದ್ದಾರೆ.ಬಹುದೂರದವರೆಗೆ ಹರಡಿಕೊಂಡಿ­ರುವ ಮಣ್ಣಿನ ಅವಶೇಷಗಳಡಿ ಅನೇಕರು ಸಿಲುಕಿ­ಕೊಂಡಿರುವ ಸಾಧ್ಯತೆ ಇದೆ.ರಸ್ತೆ ಸಮಸ್ಯೆಯಿಂದಾಗಿ ಬುಧವಾರ­ವಷ್ಟೇ ಹಾನಿಯ ಸ್ಥಳಗಳಿಗೆ ರಕ್ಷಣಾ ತಂಡ­ಗಳು ತಲುಪಿವೆ. ಪ್ರಾಥಮಿಕ ಅಂದಾ­ಜಿನ ಪ್ರಕಾರ, ಭೂಕಂಪ­ದಿಂದ ಮೂರು ಲಕ್ಷ ಜನರು ತೊಂದರೆಗೊಳ­ಗಾಗಿದ್ದಾರೆ.ಭೂಕಂಪ ಸಂಭವಿಸಿದ ಆರೂ ಜಿಲ್ಲೆ­ಗಳಲ್ಲಿ ಬಲೂಚಿಸ್ತಾನದ ಮುಖ್ಯ­­ಮಂತ್ರಿ ಅಬ್ದುಲ್‌ ಮಲಿಕ್‌ ಬಲೋಚ್‌ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry