ಪಾಕ್‌ ಮೀನುಗಾರರ ಸೆರೆ

7

ಪಾಕ್‌ ಮೀನುಗಾರರ ಸೆರೆ

Published:
Updated:

ಅಹಮದಾಬಾದ್‌ (ಪಿಟಿಐ): ರಾಜ್ಯದ ಜಾಮ್‌ನಗರ ಬಳಿಯ ಕಡಲಿನ ಅಂತಾ­ರಾಷ್ಟ್ರೀಯ ಗಡಿ ದಾಟಿ ಬಂದ ಪಾಕಿಸ್ತಾ­ನದ ದೋಣಿಯೊಂದನ್ನು ವಶಕ್ಕೆ ತೆಗೆದು­ಕೊಂಡಿರುವ ಭಾರತೀಯ ಕರಾವಳಿ ಕಾವಲುಪಡೆ ಅದರಲ್ಲಿದ್ದ ಏಳು ಜನ ಮೀನುಗಾರರನ್ನು ಬಂಧಿಸಿದೆ.ಬಂಧಿತರನ್ನು ವಿಚಾರಣೆಗಾಗಿ ಜಾಮ್‌­ನಗರದ ಒಖಾ ಜಂಟಿ ತನಿಖಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.ಅಂತಾ­ರಾಷ್ಟ್ರೀಯ ಗಡಿ ಉಲ್ಲಂಘನೆ ಆರೋ­ಪದಡಿ ಪಾಕ್‌ ಕರಾವಳಿ ಕಾವಲು ಪಡೆ ಗುರುವಾರ 58 ಭಾರತೀಯ ಮೀನು­ಗಾರರನ್ನು ಬಂಧಿಸಿತ್ತು.

ಮೀನುಗಾರಿಕೆ ಹಂಗಾಮು ಆರಂಭವಾದ ನಂತರ ಉಭಯ ದೇಶಗಳ ಕಡೆಯಿಂದ ನಡೆದ ಮೊದಲ ಬಂಧನ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry