ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದ ಹೆಲಿಕಾಪ್ಟರ್: 4 ಭಾರತೀಯ ಸೇನಾ ಅಧಿಕಾರಿಗಳ ಸೆರೆ

7

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದ ಹೆಲಿಕಾಪ್ಟರ್: 4 ಭಾರತೀಯ ಸೇನಾ ಅಧಿಕಾರಿಗಳ ಸೆರೆ

Published:
Updated:

ನವದೆಹಲಿ / ಇಸ್ಲಾಮಾಬಾದ್ (ಐಎಎನ್ಎಸ್): ಭಾರತೀಯ ಸೇನಾ ಹೆಲಿಕಾಪ್ಟರ್ ಒಂದು ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನಿ ಆಡಳಿತಕ್ಕೆ ಒಳಪಟ್ಟಿರುವ ಕಾಶ್ಮೀರ ಪ್ರದೇಶದಲ್ಲಿ ಇಳಿದಿದ್ದು, ಅದರಲ್ಲಿ ಇದ್ದ ನಾಲ್ಕು ಮಂದಿ ಭಾರತೀಯ ಸೇನಾ ಅಧಿಕಾರಿಗಳನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಲ್ಲಿ ಭಾನುವಾರ ತಿಳಿಸಿದ್ದಾರೆ.ಹೆಲಿಕಾಪ್ಟರ್ ಮತ್ತು ಅದರಲ್ಲಿ ಇದ್ದ ಪ್ರಯಾಣಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಲುವಾಗಿ ಪಾಕಿಸ್ತಾನದ ಜೊತೆಗೆ ಸಂಪರ್ಕ ಸಾಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು.ಹೆಲಿಕಾಪ್ಟರಿನಲ್ಲಿ ಮೂವರು ಅಧಿಕಾರಿಗಳು ಇದ್ದರು. ಅವರ ಪೈಕಿ ಇಬ್ಬರು ಪೈಲಟ್ ಗಳು ಮತ್ತು ಒಬ್ಬರು ಜ್ಯೂನಿಯರ್ ಕಮೀಷನ್ಡ್ ಅಧಿಕಾರಿ. ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದ ಲೇಹ್ ನಿಂದ ಹೆಲಿಕಾಪ್ಟರ್ ಬಾನಿಗೇರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry