ಪಾಕ್ ಆಟಗಾರರಿಗೆ ಶಿಕ್ಷೆ: ಎಹ್ಸಾನ್ ಮಣಿ ನಿರೀಕ್ಷೆ

7

ಪಾಕ್ ಆಟಗಾರರಿಗೆ ಶಿಕ್ಷೆ: ಎಹ್ಸಾನ್ ಮಣಿ ನಿರೀಕ್ಷೆ

Published:
Updated:

ಕರಾಚಿ (ಪಿಟಿಐ): ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಸೂಕ್ತವಾದ ತನಿಖೆ ನಂತರ, ವಿಚಾರಣೆಯೂ ಪೂರ್ಣಗೊಂಡಿದ್ದು ತಪ್ಪು ಮಾಡಿದ ಪಾಕಿಸ್ತಾನದ ಆಟಗಾರರಿಗೆ ಶಿಕ್ಷೆಯಾಗುತ್ತದೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ ನಿರೀಕ್ಷಿಸಿದ್ದಾರೆ.ಐಸಿಸಿ ನೇಮಿಸಿರುವ ಸ್ವತಂತ್ರ ವಿಚಾರಣಾ ಸಮಿತಿಯು ತೀರ್ಪನ್ನು ಫೆಬ್ರುವರಿ 5ರವರೆಗೆ ಮುಂದೂಡಿರುವ ನಿರ್ಧಾರಕ್ಕೆ ಬೆಂಬಲ ನೀಡಿರುವ ಮಣಿ ‘ಸಾಕ್ಷಿಗಳು ಹಾಗೂ ಆಟಗಾರರು ನೀಡಿರುವ ವಿವರಣೆಯನ್ನು ಸಂಪೂರ್ಣವಾಗಿ ಪರಿಶೀಲಿಸಲು ಒಂದಿಷ್ಟು ಸಮಯ ಅಗತ್ಯ. ತಪ್ಪಿತಸ್ಥ ಕ್ರಿಕೆಟಿಗರಿಗೆ ಮುಂದಿನ ತಿಂಗಳು ತಕ್ಕ ಶಿಕ್ಷೆಯಾಗಲಿದೆ. ಹಾಗೆ ಆಗುವುದು ಅಗತ್ಯವಾಗಿದೆ.ಆಗಲೇ ವಿಶ್ವ ಕ್ರಿಕೆಟ್‌ಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡುತ್ತದೆ’ ಎಂದು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ದೊಡ್ಡ ಪ್ರಭಾವವಲಯವನ್ನು ಹೊಂದಿರುವ ಆಟಗಾರರ ವಿಚಾರಣೆಯನ್ನು ನಿಭಾಯಿ ಸಲು ಸಮಿತಿಯು ಸಮರ್ಥವಾಗಿಲ್ಲ ಎನ್ನುವ ಟೀಕೆಗಳನ್ನು ಒಪ್ಪದ ಅವರು ‘ಸಮಿತಿಯಲ್ಲಿ ಕಾನೂನಿನ ಸೂಕ್ಷ್ಮಗಳನ್ನು ಅರಿತವರಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry