ಭಾನುವಾರ, ಮೇ 9, 2021
25 °C

ಪಾಕ್ ಉಗ್ರರ ಸ್ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ):  2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಗೆ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರಗಾಮಿ ಸಂಘಟನೆಯೇ ನೇರ ಹೊಣೆಯಾಗಿದ್ದು, ಕಾಶ್ಮೀರದಲ್ಲಿ ನಿರಂತರ ಅಶಾಂತಿ ಹರಡುತ್ತಿದೆ ಎಂದು ಅಮೆರಿಕ ಪ್ರತಿಪಾದಿಸಿದೆ.ಈ ಸಂಘಟನೆ ನೆರೆ ಹೊರೆಯ ದೇಶಗಳ ಪ್ರಾದೇಶಿಕ ಬಾಂಧವ್ಯಗಳನ್ನು ಅತ್ಯಂತ ದುರ್ಭರಗೊಳಿಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ. ಎಲ್‌ಇಟಿ ಜೊತೆಗೆ ಜೈಎಎಂ ಮತ್ತು ಎಚ್‌ಯುಎಂ ಕೂಡಾ ಕೈಜೋಡಿಸಿವೆ ಎಂದು ಅದು ಸ್ಪಷ್ಟಪಡಿಸಿದೆ. ಭಯೋತ್ಪಾದನೆ ಕುರಿತಂತೆ ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ಇಲಾಖೆಯು, `ಉಗ್ರರಿಗೆ ಪಾಕ್ ಸ್ವರ್ಗ ಸದೃಶವಾಗಿದೆ~ ಎಂದು ಪುನರುಚ್ಚರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.