ಪಾಕ್ ಏಕದಿನ ತಂಡದ ಅಭ್ಯಾಸ

7

ಪಾಕ್ ಏಕದಿನ ತಂಡದ ಅಭ್ಯಾಸ

Published:
Updated:

ಚೆನ್ನೈ (ಪಿಟಿಐ): ನಾಯಕ ಮಿಸ್ಬಾ ಉಲ್ ಹಕ್ ಒಳಗೊಂಡಂತೆ ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡದ ಆರು ಆಟಗಾರರು ಇಲ್ಲಿನ ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ಗುರುವಾರ ಕಠಿಣ ತಾಲೀಮು ಕೈಗೊಂಡರು.ಪಾಕ್ ಟ್ವೆಂಟಿ-20 ತಂಡದಲ್ಲಿಲ್ಲದ ಈ ಆಟಗಾರರು ಗುರುವಾರ ಬೆಳಿಗ್ಗೆ ಚೆನ್ನೈಗೆ ಬಂದಿಳಿದರು. ಮಧ್ಯಾಹ್ನ 2.00 ಗಂಟೆಯ ವೇಳೆಗೆ ಕ್ರೀಡಾಂಗಣಕ್ಕೆ ಆಗಮಿಸಿದರಲ್ಲದೆ, ಸುಮಾರು ಹೊತ್ತು ಅಭ್ಯಾಸ ನಡೆಸಿದರು. ಈ ಆಟಗಾರರು ಶುಕ್ರವಾರ ಕೂಡಾ ಅಭ್ಯಾಸ ನಡೆಸಲಿದ್ದಾರೆ.ಏಕದಿನ ತಂಡದ ಇತರ ಆಟಗಾರರು ಡಿಸೆಂಬರ್ 29 ರಂದು ಆಗಮಿಸಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿ ಡಿ. 30 ರಂದು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry