ಸೋಮವಾರ, ಮೇ 10, 2021
25 °C

ಪಾಕ್ ಐಎಸ್‌ಐಗೆ ರೂ.600 ಕೋಟಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್ ಐಎಸ್‌ಐಗೆ ರೂ.600 ಕೋಟಿ !

ಇಸ್ಲಾಮಾಬಾದ್ (ಪಿಟಿಐ)
: ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಅವರ ನಿರ್ದೇಶನದ ಅನ್ವಯ  `ವಿಶೇಷ ಕಾರ್ಯ' ಸಾಧನೆಗಾಗಿ ಐಎಸ್‌ಐಗೆ ರೂ.600 ಕೋಟಿ (ಪಾಕಿಸ್ತಾನದ ಕರೆನ್ಸಿ ಪ್ರಕಾರ) ಒದಗಿಸಲಾಗಿದೆ.ತಂಬಾಕು ಜಾಹೀರಾತು:ಧೂಮಪಾನಕ್ಕೆ ಪ್ರೇರಣೆ 

ಲಂಡನ್ (ಪಿಟಿಐ
): ಪ್ರತಿ 10 ತಂಬಾಕು ಜಾಹೀರಾತುಗಳು ಶೇ 40ರಷ್ಟು ಯುವಕರಲ್ಲಿ ತಂಬಾಕು ಸೇವನೆ ಮಾಡುವಂತಹ ಅಪಾಯಗಳಿಗೆ ಒಳಗಾಗಲು ಪ್ರಚೋದನೆ ಮಾಡುತ್ತವೆ ಹಾಗೂ ಪ್ರತಿದಿನ ಅವರು  ಧೂಮಪಾನ ಮಾಡುವ ಸಾಧ್ಯತೆ ಶೇ 30 ರಷ್ಟು ಇರುತ್ತದೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ.ಎರಡೂವರೆ ವರ್ಷಗಳ ಕಾಲ 10ರಿಂದ 15ವರ್ಷ ವಯಸ್ಸಿನ ಧೂಮಪಾನ ಮಾಡದೇ ಇರುವ 1,300ಯುವಕರನ್ನು ಸಂಶೋಧನೆಗೆ ಒಳಪಡಿಸಿದ್ದು, ತಂಬಾಕು ಜಾಹೀರಾತುಗಳ ಪ್ರದರ್ಶನ ಹಾಗೂ ನಂತರದ ಅವರ ವರ್ತನೆ ಕುರಿತು ಅಧ್ಯಯನ ನಡೆಸಲಾಯಿತು.ಮಂಡೇಲಾ ಕೊಂಚ ಚೇತರಿಕೆ

ಜೋಹಾನ್ಸ್‌ಬರ್ಗ್ (ಪಿಟಿಐ)
: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿದೆ. ಅವರು ಔಷಧಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಗುರುವಾರ ಹೇಳಿದೆ.ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಕಳೆದ ಆರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಮಂಡೇಲಾ ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದೆ.ರೆಸ್ಟೋರೆಂಟ್ ಮಾಲೀಕ ತಪ್ಪೊಪ್ಪಿಗೆ

ವಾಷಿಂಗ್ಟನ್ (ಪಿಟಿಐ
): ಆಸ್ಟ್ರೇಲಿಯಾ ವಿರೋಧ ಪಕ್ಷದ ನಾಯಕ ಮಲ್ ಬರ್ಗ್ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಖಾದ್ಯವೊಂದರ ಹೆಸರನ್ನು ತಾನೇ ಇಟ್ಟಿದ್ದಾಗಿ ರೆಸ್ಟೋರೆಂಟ್ ಮಾಲೀಕ  ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.ಖಾದ್ಯವೊಂದರ ಹೆಸರಿಗೆ ಪ್ರಧಾನಿ ಜುಲಿಯಾ ಗಿಲ್ಲಾರ್ಡ್ ಅವರ ದೇಹವನ್ನು ಬಣ್ಣಿಸುವಂತಹ ಕಾಮಪ್ರಚೋದಕ ಶಬ್ದಗಳನ್ನು ಬಳಸಲಾಗಿತ್ತು. ಇದನ್ನು ಗಿಲ್ಲಾರ್ಡ್ ತೀವ್ರವಾಗಿ ಖಂಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.