ಪಾಕ್ ಗಾಯಕ ರಾಹತ್‌ಗೆ 15 ಲಕ್ಷ ದಂಡ

7

ಪಾಕ್ ಗಾಯಕ ರಾಹತ್‌ಗೆ 15 ಲಕ್ಷ ದಂಡ

Published:
Updated:

ನವದೆಹಲಿ, (ಪಿಟಿಐ): ಭಾರಿ ಮೊತ್ತದ ವಿದೇಶಿ ಕರೆನ್ಸಿಯನ್ನು ತಮ್ಮೊಡನೆ ಸಾಗಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಗಾಯಕ ರಾಹತ್ ಫತೇ ಆಲಿ ಖಾನ್ ಮತ್ತು ಅವರ ವ್ಯವಸ್ಥಾಪಕ ಮರೂಫ್ ಅವರಿಗೆ ತಲಾ 15 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆದರೆ ಅವರಿಬ್ಬರೂ ದಂಡದ ಹಣವನ್ನು ಪಾವತಿಸಿಲ್ಲ. ದಂಡ ಪಾವತಿಸಿದ ಬಳಿಕವಷ್ಟೇ ದೇಶದಿಂದ ಹೊರಹೋಗಲು ಅವರಿಗೆ ಸಮ್ಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.ಇದೇ ವೇಳೆ ಈವೆಂಟ್ ಮ್ಯಾನೇಜರ್ ಚೈತ್ರೇಶ್ ಶ್ರೀವಾಸ್ತವ ಮತ್ತು ಹಾಗೂ ಮುಂಬೈನ ಇಬ್ಬರು ವಿದೇಶಿ ವಿನಿಮಯ ಮಾರಾಟಗಾರರ ವಿರುದ್ಧ ನಡೆಸುತ್ತಿರುವ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry