ಪಾಕ್ ಜನರ ಪ್ರೀತಿಗೆ ಮನಸೋತ ಮೀರಾ

7

ಪಾಕ್ ಜನರ ಪ್ರೀತಿಗೆ ಮನಸೋತ ಮೀರಾ

Published:
Updated:

ಇಸ್ಲಾಮಾಬಾದ್ (ಪಿಟಿಐ): ಭಾರತದ ಬಗ್ಗೆ ಪಾಕಿಸ್ತಾನಿಯರು ವ್ಯಕ್ತಪಡಿಸಿದ `ಪ್ರೀತಿ~ಯನ್ನು ಕಂಡು ಅಚ್ಚರಿಗೊಂಡ ಲೋಕಸಭಾ ಅಧ್ಯಕ್ಷೆ ಮೀರಾಕುಮಾರ್, ಎಲ್ಲ ವಿಚಾರಗಳಲ್ಲೂ ಉಭಯ ದೇಶಗಳ ನಡುವೆ ಇಂಥದ್ದೇ ಬಾಂಧವ್ಯ ಬೆಳೆಯಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.ಹದಿನೇಳು ಮಂದಿ ಸಂಸತ್ ಸದಸ್ಯರ ನಿಯೋಗದೊಂದಿಗೆ ಪಾಕಿಸ್ತಾನದ ಲಾಹೋರ್ ಮತ್ತು ಇಸ್ಲಾಮಾಬಾದ್‌ಗೆ ಭೇಟಿ ನೀಡಿರುವ ಅವರು, ಇಲ್ಲಿನ ನಾಗರಿಕರು ಭಾರತೀಯರ ಬಗ್ಗೆ ತೋರಿದ ಪ್ರೀತಿಕಂಡು ಬೆರಗಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರನ್ನೊಳಗೊಂಡ ನಿಯೋಗವು ಉಭಯ ದೇಶಗಳ ನಡುವೆ `ಪ್ರೀತಿ ಮತ್ತು ಶಾಂತಿ ಸಂದೇಶ~ ಸಾರುವುದಕ್ಕಾಗಿ ಈ ಪ್ರವಾಸ ಕೈಗೊಂಡಿದ್ದೇವೆ ಎಂದು ಮೀರಾಕುಮಾರ್ ತಿಳಿಸಿದ್ದಾರೆ.ಶುಕ್ರವಾರ ಪಂಜಾಬ್ ಪ್ರಾಂತ್ಯದ ಸಂಸತ್ ಸದಸ್ಯರೊಂದಿಗೆ ಲಾಹೋರ್‌ನಲ್ಲಿರುವ ಮಿನಾರ್ -ಇ-ಪಾಕಿಸ್ತಾನ್‌ಗೆ ಭೇಟಿ ನೀಡಿದ ಅವರು, ಪ್ರವಾಸಿಗರ ಪುಸ್ತಕದಲ್ಲಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಶುಭ ಹಾರೈಕೆಯ ನುಡಿಗಳನ್ನು ಬರೆದಿದ್ದಾರೆ.ಲೋಕಸಭಾ ಸದಸ್ಯರೊಂದಿಗೆ ಇಲ್ಲಿಗೆ ಆಗಮಿಸಿರುವ ನಿಯೋಗ, ಲಾಹೋರ್‌ನಲ್ಲಿರುವ ಪಂಜಾಬ್ ಪ್ರಾಂತ್ಯದ ವಿಧಾನಸಭೆಗೆ ಭೇಟಿ ನೀಡಿ, ಅಲ್ಲಿ ನಡೆದ ನಡಾವಳಿಗೆ ಸಾಕ್ಷಿಯಾಯಿತು. ಇದೇ ಸಂದರ್ಭದಲ್ಲಿ ಮೀರಾಕುಮಾರ್ ಅವರು ಪಂಜಾಬ್ ಪ್ರಾಂತ್ಯದ ವಿಧಾನಸಭಾ ಅಧ್ಯಕ್ಷ ರಾಣಾ ಮೊಹ್ಮಮದ್ ಇಕ್ಬಾಲ್ ಅವರೊಂದಿಗೆ ಸಭೆ ನಡೆಸಿದರು.`ಭಾರತೀಯರು ಪಾಕ್ ನಾಗರಿಕ ರೊಂದಿಗೆ ಸ್ನೇಹಪರ ವಾತಾವರಣ ನಿರ್ಮಾಣವಾಗಬೇಕೆಂದು ಬಯ ಸುವು ದಾಗಿ~ ಮೀರಾಕುಮಾರ್ ತಿಳಿ ಸಿದ್ದಾರೆ. ಭಾರತದ ಮೊದಲ ಮಹಿಳಾ ಲೋಕ ಸಭಾ ಅಧ್ಯಕ್ಷೆಯ ಪಾಕಿಸ್ತಾನದ ಭೇಟಿ ಯನ್ನು `ಐತಿಹಾಸಿಕ ಘಟನೆ~ ಎಂದು `ಡಾನ್~ ಪತ್ರಿಕೆ ಬಣ್ಣಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry