ಗುರುವಾರ , ಮೇ 13, 2021
17 °C

ಪಾಕ್ ನಲ್ಲಿ ಶಾಲಾ ಬಸ್ ಉರುಳಿ 38 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ  105ಕ್ಕೂ ಅಧಿಕ ಶಾಲಾ ಮಕ್ಕಳನ್ನು ಪಿಕ್ ನಿಕ್ ಗೆ ಕರೆದೊಯ್ದಿದ್ದ ಬಸ್ಸೊಂದು ಮರಳಿ ಬರುವಾಗ ಉರುಳಿ 38 ಮಂದಿ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ವರದಿಯಾಗಿದೆ.ಈ ಘಟನೆಯಲ್ಲಿ 70 ಮಂದಿ ಗಾಯಗೊಂಡಿದ್ದಾರೆ.

ಪಿಕ್ ನಿಕ್ ಮುಗಿಸಿಕೊಂಡು ಫೈಸಲಾಬಾದ್ ನಿಂದ ಬರುವಾಗ ಇಸ್ಲಾಮಾಬಾದ್ ನಿಂದ 125 ಕಿ.ಮೀ ದುರದಲ್ಲಿನ ಕಲರ್ ಕಹರ್ ಎಂಬಲ್ಲಿ  ರಾತ್ರಿ 7.50ರ ಸುಮಾರು ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಉರುಳಿಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ತವರಲ್ಲಿ 12 ರಿಂದ 13 ರ ವಯೋಮಾನದ ಹುಡುಗರು ಸೇರಿದ್ದಾರೆ. ಈ ದುರ್ಘಟನೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಕೆಲವು ಶಿಕ್ಷಕರೂ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಬಹುತೇಕರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು, ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.