ಪಾಕ್ ನಿಂದ ಕದನವಿರಾಮ ಉಲ್ಲಂಘನೆ, ದಾಳಿ: ಭಾರತೀಯರಿಬ್ಬರ ಹತ್ಯೆ

7

ಪಾಕ್ ನಿಂದ ಕದನವಿರಾಮ ಉಲ್ಲಂಘನೆ, ದಾಳಿ: ಭಾರತೀಯರಿಬ್ಬರ ಹತ್ಯೆ

Published:
Updated:

ಶ್ರೀನಗರ (ಪಿಟಿಐ/ಐಎಎನ್‌ಎಸ್): ಪಾಕಿಸ್ತಾನವು ಮಂಗಳವಾರ ಗಡಿ ನಿಯಂತ್ರಣ ರೇಖೆಯ ಯುರಿ ವಲಯದಲ್ಲಿ ಕದನವಿರಾಮವನ್ನು ಉಲ್ಲಂಘಿಸಿ ಗುಂಡು ಹಾರಿಸಿ ಇಬ್ಬರು ಭಾರತೀಯರನ್ನು ಹತ್ಯೆ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.ರಕ್ಷಣಾ ವಕ್ತಾರರಾದ ಲೆಫ್ಟಿನೆಂಟ್ ಕರ್ನಲ್ ಜೆ.ಎಸ್. ಬ್ರಾರ್ ಅವರು ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಅಕ್ಟೋಬರ್ 3 ರಿಂದ ಪದೇ ಪದೇ ಪಾಕಿಸ್ತಾನವು ಕದನವಿರಾಮವನ್ನು ಉಲ್ಲಂಘಿಸುತ್ತಿದ್ದು, ಮಂಗಳವಾರ ಬೆಳಿಗ್ಗೆಯೂ ಕೂಡ ಅಪ್ರಚೋದಿತವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಬಾರಾಮುಲ್ಲಾ ಜಿಲ್ಲೆಯ ಯುರಿ ವಲಯದಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.ಜಮ್ಮು ವಲಯದ ಗಡಿ ನಿಯಂತ್ರಣ ರೇಖೆಯ ಬಳಿಯೂ ಪಾಕ್ ಸೈನಿಕರು ಕಳೆದ ಒಂದು ತಿಂಗಳಿನಿಂದ ಅಪ್ರಚೋದಿತವಾಗಿ ದಾಳಿ ನಡೆಸುತ್ತಿದ್ದು, ಇಬ್ಬರು ಹಳ್ಳಿಗರು ಈವರೆಗೆ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry