ಪಾಕ್ ನೆಲೆಯಲ್ಲಿ ಅಲ್‌- ಖೈದಾ ಮುಖ್ಯಸ್ಥ ಜವಾಹರಿ: ಕ್ಲಿಂಟನ್

7

ಪಾಕ್ ನೆಲೆಯಲ್ಲಿ ಅಲ್‌- ಖೈದಾ ಮುಖ್ಯಸ್ಥ ಜವಾಹರಿ: ಕ್ಲಿಂಟನ್

Published:
Updated:

ಕೋಲ್ಕತ್ತಾ (ಐಎಎನ್ಎಸ್): `ಅಲ್‌- ಖೈದಾ ಉಗ್ರಗಾಮಿ ಸಂಘಟನೆಯ ನೂತನ ನಾಯಕ ಐಮನ್ ಅಲ್- ಜವಾಹರಿ ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾನೆ~ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಸೋಮವಾರ ಇಲ್ಲಿ ಹೇಳಿದರು.

ಮೂರು ದಿನಗಳ ಭಾರತ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಹಿಲರಿ ಕ್ಲಿಂಟನ್, ಮಾಧ್ಯಮದವರೊಂದಿಗೆ ಮಾತನಾಡುತ್ತಾ  ~ಈಜಿಫ್ಟಿನ ಮೌಲ್ವಿ ಐಮನ್ ಅಲ್- ಜವಾಹರಿಯು ಅಲ್‌ಖೈದಾ ಸಂಘಟನೆಯ ಮುಖ್ಯ ರೂವಾರಿಯಾಗಿದ್ದ ಒಸಾಮ ಬಿನ್ ಲಾಡೆನ್ ಹತ್ಯೆಯ ನಂತರ ಜವಾಹರಿಯು ಆ ಸಂಘಟನೆಯ ನಾಯಕತ್ವವನ್ನು ವಹಿಸಿಕೊಂಡಿದ್ದಾನೆ.ಆತನು ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂದು ನಾವು ನಂಬಿದ್ದೇವೆ. ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಅಲ್‌ಖೈದಾ ಸಂಘಟನೆಯನ್ನು ನಾವು ಸಂಪೂರ್ಣವಾಗಿ ನಿಷ್ಕ್ರಿಯೆಗೊಳಿಸುತ್ತೇವೆ~ ಎಂದು ಅವರು ಗುಡುಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry