ಪಾಕ್ ನ್ಯಾಯಾಂಗ ಆಯೋಗಕ್ಕೆ ವೀಸಾ

7

ಪಾಕ್ ನ್ಯಾಯಾಂಗ ಆಯೋಗಕ್ಕೆ ವೀಸಾ

Published:
Updated:

ಇಸ್ಲಾಮಾಬಾದ್ (ಪಿಟಿಐ): 2008ರಲ್ಲಿ ನಡೆದ ಮುಂಬೈ 26/11ರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಸೆಪ್ಟೆಂಬರ್ 21ರಂದು ಬರಲಿರುವ ಪಾಕಿಸ್ತಾನದ ನ್ಯಾಯಾಂಗ ಆಯೋಗಕ್ಕೆ ಭಾರತ ಬುಧವಾರ ವೀಸಾ ನೀಡಿದೆ.8 ಮಂದಿಯನ್ನು ಒಳಗೊಂಡ ಪಾಕ್ ನ್ಯಾಯಾಂಗ ಆಯೋಗವು  45 ದಿನಗಳ ವೀಸಾ ನೀಡುವಂತೆ ಭಾರತವನ್ನು ಕೋರಿತ್ತು ಆದರೆ ಅದನ್ನು ತಿರಸ್ಕರಿಸಿರುವ ಭಾರತ ಹೈ ಕಮಿಷನ್ 7 ದಿನಗಳ ವೀಸಾ ನೀಡಿದೆ. ಅಲ್ಲದೇ ತನಿಖೆ ನಡೆಸಲು ಮುಂಬೈ, ದೆಹಲಿ, ಆಗ್ರಾ ಹಾಗೂ ಅಮೃತಸರಗಳಿಗೂ  ಭೇಟಿ ನೀಡಬಹುದು ಎಂದು ಭಾರತ ಹೇಳಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry