ಪಾಕ್: ಪತ್ರಕರ್ತರ ಮಾಹಿತಿ ಸಂಗ್ರಹ

7

ಪಾಕ್: ಪತ್ರಕರ್ತರ ಮಾಹಿತಿ ಸಂಗ್ರಹ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಸೇನೆಯ ಗುಪ್ತಚರ ವಿಭಾಗದ ಅಧಿಕಾರಿಗಳು ದೇಶದಾದ್ಯಂತ ಇರುವ ಪ್ರಮುಖ ಪತ್ರಕರ್ತರು ಮತ್ತು ಅಂಕಣಕಾರರ ಜಾತಿ, ಧರ್ಮ, ಪಾಸ್‌ಪೋರ್ಟ್, ಬ್ಯಾಂಕ್ ಖಾತೆ ಮತ್ತು ಇನ್ನಿತರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.ಉರ್ದು ಭಾಷೆಯಲ್ಲಿರುವ ಎರಡು ಪುಟಗಳ ಪ್ರಶ್ನಾವಳಿಯನ್ನು ಎಲ್ಲಾ ಪತ್ರಕರ್ತರಿಗೂ ನೀಡಲಾಗಿದ್ದು, ಅದರಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಕೊಡುವಂತೆ ಸೂಚಿಸಲಾಗಿದೆ ಎಂದು `ದಿ ನ್ಯೂಸ್ ಡೈಲಿ' ವರದಿ ಮಾಡಿದೆ.ವಿವಿಧ ಮಾಧ್ಯಮಗಳ ಪ್ರಮುಖ ಪತ್ರಕರ್ತರು, ಸಂಸತ್ ಸದಸ್ಯರೂ ಆಗಿರುವ ಅಂಕಣಕಾರರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ರಾವಲ್ಪಿಂಡಿಯಲ್ಲಿ ಇರುವ ಆಯ್ದ ಪತ್ರಕರ್ತರು ಸೇನೆಯ 10ನೇ ವಿಭಾಗದ ವ್ಯಾಪ್ತಿಯಲ್ಲಿ ಇರುತ್ತಾರೆ ಎಂದು ಹೇಳಲಾಗಿದೆ.

ಇಬ್ಬರು ಅಧಿಕಾರಿಗಳು ಮಂಗಳವಾರ `ದಿ ನ್ಯೂಸ್ ಡೈಲಿ' ವರದಿಗಾರ್ತಿ ಮರಿಯಾನಾ ಬಾಬರ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.

ಪತ್ರಕರ್ತರ ದೂರವಾಣಿ ಸಂಖ್ಯೆಯನ್ನೂ ಪಡೆದುಕೊಂಡಿದ್ದಾರೆ.ಪ್ರಶ್ನಾವಳಿಯ ಕೊನೆಯಲ್ಲಿ ಇರುವ ಷರಾ ಕಾಲಂನಲ್ಲಿ ಬಾಬರ್ ಅವರು ` ಸಂವಿಧಾನ ಮತ್ತು ನೆಲದ ಕಾನೂನಿನ ಪ್ರಕಾರ ಪತ್ರಕರ್ತರು ಸೇನಾ ಗುಪ್ತಚರ ವಿಭಾಗಕ್ಕೆ ವೈಯಕ್ತಿಕ ಮಾಹಿತಿ ನೀಡುವುದು ಕಡ್ಡಾಯವಲ್ಲ' ಎಂದು ಬರೆದಿದ್ದಾರೆ.ಸೇನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪತ್ರಕರ್ತರಿಗೆ ಭದ್ರತಾ ತಪಾಸಣೆಯ ಅಂಗವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆಯಾದರೂ ಇದರ ಹಿಂದಿನ ಉದ್ದೇಶ ಬೇರೆ ಏನೋ ಇದ್ದಂತಿದೆ ಎಂದು ಬಾಬರ್ ಅವರು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry