ಬುಧವಾರ, ಮೇ 12, 2021
18 °C

ಪಾಕ್ ಪ್ರಜೆಗೆ 12 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಲಷ್ಕರ್- ಎ- ತೊಯ್ಬಾ (ಎಲ್‌ಇಟಿ) ಸಂಘಟನೆಗೆ ಬೆಂಬಲ ನೀಡಿದ ಆರೋಪದ ಮೇಲೆ  ಪಾಕಿಸ್ತಾನದ ಪ್ರಜೆಗೆ ಅಮೆರಿಕದ ಜಿಲ್ಲಾ ನ್ಯಾಯಾಲಯವು 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.`ಜುಬೇರ್ ಅಹಮದ್ (24),ಎಲ್‌ಇಟಿಯ ಭಯೋತ್ಪಾದಕ ಪ್ರಚಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನ ಮಗ ತಹ್ಲಾ ಸಯೀದ್‌ನೊಂದಿಗೆ ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡ ಕಾರಣ ಅಹಮದ್‌ನನ್ನು 2010ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ವುಡ್‌ಬ್ರಿಡ್ಜ್‌ನಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಗಿತ್ತು.ಅರೆಸೇನೆ ತರಬೇತಿ: 26/11ರ ಮುಂಬೈ ದಾಳಿಕೋರರಿಗೆ ಲಷ್ಕರ್- ಎ- ತೊಯ್ಬಾ ಸಂಘಟನೆಯು (ಎಲ್‌ಎಟಿ) ಅರೆಸೇನೆ ತರಬೇತಿ ನೀಡಿತ್ತು ಎಂದು ಅಮೆರಿಕದ ಅಟಾರ್ನಿ ನೀಲ್ ಎಚ್  ಮ್ಯಾಕ್‌ಬ್ರಿಜ್ ಅವರು ಜಿಲ್ಲಾ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.