ಬುಧವಾರ, ಏಪ್ರಿಲ್ 14, 2021
23 °C

ಪಾಕ್ ಪ್ರಧಾನಿಗೆ ಸುಪ್ರೀಂ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್ ಪ್ರಧಾನಿಗೆ ಸುಪ್ರೀಂ ನೋಟಿಸ್

ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಅವರಿಗೆ ಸುಪ್ರಿಂಕೋರ್ಟ್ ಬುಧವಾರ ಷೋಕಾಸ್ ನೋಟಿಸ್ ನೀಡಿದ್ದು, ಆಗಸ್ಟ್ 27ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ.ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಮರು ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನ್ಯಾಯಮೂರ್ತಿ ಆಸೀಫ್ ಸಯೀದ್ ಖೋಸ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ನ್ಯಾಯಾಂಗ ನಿಂದನೆಗಾಗಿ ಸಂವಿಧಾನದ 204ನೇ ಕಲಂ ಅಡಿಯಲ್ಲಿ ಈ ನೋಟಿಸ್ ನೀಡಿದೆ.`ನ್ಯಾಯಾಲಯ ಹಲವು ಬಾರಿ ನೀಡಿರುವ ಆದೇಶದಂತೆ ಅಧ್ಯಕ್ಷರ ವಿರುದ್ಧದ ಪ್ರಕರಣಗಳ ಮರು ತನಿಖೆಗೆ ಸ್ವಿಟ್ಜರ್‌ಲೆಂಡ್ ಅಧಿಕಾರಿಗಳನ್ನು ಸಂಪರ್ಕಿಸಲೇಬೇಕು~ ಎಂದು ನ್ಯಾಯಾಲಯ ಸೂಚಿಸಿದೆ.`ಈ ವಿಷಯದಲ್ಲಿ ಮುಂದಿನ ವಿಚಾರಣೆ ನಡೆಯುವ ಆಗಸ್ಟ್ 27ರೊಳಗಾಗಿ ಕ್ರಮ ಕೈಗೊಳ್ಳಲು ಮುಂದಾಗುವುದು ಒಳಿತು. ಇಲ್ಲದಿದ್ದರೆ ನ್ಯಾಯಾಲಯವೇ ಸ್ವತಃ ಕ್ರಮ ಕೈಗೊಳ್ಳಲಿದೆ~ ಎಂದು ನ್ಯಾಯಮೂರ್ತಿ ಖೋಸ್ ಉಲ್ಲೇಖಿಸಿದ್ದಾರೆ.`ಅಧ್ಯಕ್ಷರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಪದೇಪದೇ ಆದೇಶಿಸಿದ್ದರೂ ಸರ್ಕಾರ ಉದ್ದೇಶಪೂರ್ವಕವಾಗಿ ಈ ಆದೇಶ ನಿರ್ಲಕ್ಷ್ಯಿಸುತ್ತಿದೆ~ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.