ಭಾನುವಾರ, ಅಕ್ಟೋಬರ್ 20, 2019
22 °C

ಪಾಕ್ ಮನೆಗಳಿಗೆ ಜಿಹಾದ್ ಬೋಧನೆಯ ಮ್ಯಾಗಝಿನ್..!

Published:
Updated:

ಇಸ್ಲಾಮಾಬಾದ್ (ಪಿಟಿಐ): ಉಗ್ರಗಾಮಿ ಅಲ್ ಖೈದಾ ಸಂಘಟನೆಯು ಪಾಕಿಸ್ತಾನದಲ್ಲಿ  ಜಿಹಾದ್ ಬೋಧಿಸಲು ಮನೆ ಮನೆಗಳಿಗೆ ~ಹಿಟೀನ್~ ಹೆಸರಿನ ನಿಯತಕಾಲಿಕವೊಂದನ್ನು ಕಳುಹಿಸುತ್ತಿದೆ.ಸುಲ್ತಾನ್ ಸಲಾಹುದ್ದೀನ್ ಅಯೂಬಿ ಪರಾಭವಗೊಂಡ ಯುದ್ಧಭೂಮಿಗೆ ಇಡಲಾಗಿದ್ದ ~ಹಿಟೀನ್~ ಹೆಸರಿನ 200 ಪುಟಗಳ ಈ ನಿಯತಕಾಲಿಕದಲ್ಲಿ ಜಿಹಾದ್ ಬೋಧನೆ ಜೊತೆಗೆ ಒಸಾಮಾ ಬಿನ್ ಲಾಡೆನ್ ಹೊಗಳಿಕೆಯ ಲೇಖನಗಳು ಪ್ರಕಟವಾಗುತ್ತಿವೆ.ಕಳೆದ ವರ್ಷ ಜೂನ್ ತಿಂಗಳಲ್ಲಿ ಈ ನಿಯತಕಾಲಿಕವನ್ನು ಆರಂಭಿಸಲಾಗಿತ್ತು. ಅಬೋಟ್ಟಾಬಾದ್ ನಲ್ಲಿ ಬಿನ್ ಲಾಡೆನ್ ಹತ್ಯೆಯಾದ ಒಂದು ತಿಂಗಳ ಬಳಿಕ ಆರಂಭವಾದ ನಿಯತಕಾಲಿಕ ಈಗ ತನ್ನ 7ನೇ ಸಂಚಿಕೆಯನ್ನು ಪ್ರಕಟಿಸಿದ್ದು ಇದನ್ನು ಕಳೆದ ತಿಂಗಳು ಮನೆಮನೆಗಳಿಗೆ ಕಳುಹಿಸಲಾಗಿದೆ.ಶೇಖ್ ಒಸಾಮಾ ಬಲಿದಾನ ಮತ್ತು ಅಂತರರಾಷ್ಟ್ರೀಯ ಜಿಹಾದ್ ಚಳವಳಿ ಕುರಿತ ಪ್ರಬಂಧದೊಂದಿಗೆ ಈ ನಿಯತಕಾಲಿಕ ಆರಂಭವಾಗಿದೆ.ಆಫ್ಘಾನ್ ತಾಲೀಬಾನ್ ಕಮಾಂಡರ್ ಮುಲ್ಲಾ ಒಮರ್ ಮಾತುಗಳು ಮತ್ತು ಇತರ ಕೆಲವು ಅಲ್ ಖೈದಾ ಧುರೀಣರ ಉಕ್ತಿಗಳನ್ನು ನಿಯತಕಾಲಿಕವು ಒಳಗೊಂಡಿದೆ.ಕುವೈತ್ ಸಂಪುಟದಲ್ಲಿ ಇಸ್ಲಾಮೀ ವ್ಯವಹಾರಗಳ ಸಚಿವರಾಗಿದ್ದ ಹುಸೇನ್ ಷೇಖ್ ಖಾಲಿದ್ ಬಿನ್ ಅಬ್ದುಲ್ ರಹಮಾನ್ ಅಲ್ ಹುಸೇನ್ ಜೊತೆಗಿನ ಸಂದರ್ಶನ ಇದರಲ್ಲಿದೆ. ಸಚಿವ ಸಂಪುಟದಿಂದ ಹೊರಬಂದ ಹುಸೇನ್ ಈಗ  ಅಲ್ ಖೈದಾ ಸದಸ್ಯ.

Post Comments (+)