ಶುಕ್ರವಾರ, ಏಪ್ರಿಲ್ 16, 2021
31 °C

ಪಾಕ್ ರೈಲಿಗೆ ಲಾಲು ಸಲಹೆ ಕೇಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈಲ್ವೆ ಇಲಾಖೆಯನ್ನು ಸೂಕ್ತವಾಗಿ ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗದೇ ಹೋದರೆ, ಇಲಾಖೆ ನಿರ್ವಹಣೆಯ ಹೊಣೆಯನ್ನು ಭಾರತದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರಿಗೆ ನೀಡಿ ಎಂದು ಪಾಕಿಸ್ತಾನದ ಸಂಸದರೊಬ್ಬರು ಸಲಹೆ ನೀಡಿದ್ದಾರೆ.ಮುತ್ತಾಹಿದಾ ಕ್ವಾಮಿ ಚಳವಳಿಯ ಸದಸ್ಯರಾದ ಸಜೀದ್ ಅಹಮದ್ ಈ ಸಲಹೆ ನೀಡಿದ್ದಾರೆ. ತೊಂದರೆಗಳನ್ನು ಎದುರಿಸುತ್ತಿರುವ ರೈಲ್ವೆ ಇಲಾಖೆ  ಕುರಿತಂತೆ ಕೇಳಿದ ಪ್ರಶ್ನೆಗೆ ಇಲಾಖೆ ಕಾರ್ಯದರ್ಶಿ ನೊಮ್ ಇಸ್ಲಾಂ ಶೇಖ್ ಅವರು ಶುಕ್ರವಾರ ಪಾಕಿಸ್ತಾನದ ಸಂಸತ್ತಿನ ಕೆಳಮನೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ  ಅಹಮದ್ ಈ ಸಲಹೆ ನೀಡುವ ಮೂಲಕ ಸಹೋದ್ಯೋಗಿಗಳಿಗೆ ಅಚ್ಚರಿ ಮೂಡಿಸಿದರು.ಸಚಿವರಾಗಿದ್ದ ಸಂದರ್ಭದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಿಂದ ಲಾಲು ಪ್ರಸಾದ್ ಅವರನ್ನು ಗುರುತಿಸಲಾಗುತ್ತಿದೆ.ಪಾಕಿಸ್ತಾನದ ರೈಲ್ವೆ ಇಲಾಖೆಯು ಕೆಲವು ವರ್ಷಗಳಿಂದ ಆರ್ಥಿಕ ಸಮಸ್ಯೆ, ಎಂಜಿನ್‌ಗಳ ಕೊರತೆ, ಇಂಧನದ ಸಮಸ್ಯೆ, ಬಿಡಿ ಭಾಗಗಳ ಕೊರತೆ ಸೇರಿದಂತೆ ಹಲವು    ಸಮಸ್ಯೆಗಳನ್ನು ಎದುರಿಸುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.