ಪಾಕ್: ವಂಚಕ ಪ್ರಿಯಕರನಿಗೆ ಗುಂಡು ಹಾರಿಸಿದ ಯುವತಿ

7

ಪಾಕ್: ವಂಚಕ ಪ್ರಿಯಕರನಿಗೆ ಗುಂಡು ಹಾರಿಸಿದ ಯುವತಿ

Published:
Updated:

ಲಾಹೋರ್ (ಪಿಟಿಐ): ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಅಸಮಾಧಾನಗೊಂಡ ಯುವತಿಯೊಬ್ಬಳು ಆತನ ಮೇಲೆ ಗುಂಡು ಹಾರಿಸಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ.ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಆಶಿಯಾ(20) ಹಾಗೂ ಆಕೆಯ ಸಹೊದ್ಯೋಗಿ ಮಹಮ್ಮದ್ ಫೈಸಲ್ (22) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಫೈಸಲ್ ಆಕೆಯನ್ನು ದೂರಮಾಡಲು ಯತ್ನಿಸಿದ.`ಫೈಸಲ್ ನನ್ನನ್ನು ಮದುವೆಯಾಗುವುದಾಗಿ ಪ್ರಮಾಣ ಮಾಡಿದ್ದ. ನಂತರ ನನ್ನ ಮೇಲೆ ಆಸಕ್ತಿ ಕಳೆದುಕೊಂಡ. ತಾನು ಮತ್ತೊಬ್ಬಳನ್ನು ಮದುವೆ ಆಗುತ್ತಿರುವುದಾಗಿ ತಿಳಿಸಿದ. ಇದರಿಂದ ನನಗೆ ಆಘಾತವಾಯಿತು~ ಎಂದು ಪೊಲೀಸರಿಗೆ ಆಶಿಯಾ ತಿಳಿಸಿದ್ದಾಳೆ. ಪ್ರಿಯಕರನ ವಂಚನೆಯಿಂದ ಕುಪಿತಳಾದ ಆಶಿಯಾ ಗುರುವಾರ ಕಾರ್ಖಾನೆಯ ಹೊರಗೆ ಫೈಸಲ್ ಮತ್ತು ಆತನ ಸ್ನೇಹಿತನ ಮೇಲೆ ಗುಂಡು ಹಾರಿಸಿದ್ದಾಳೆ. ಘಟನೆ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ ಆಶಿಯಾಳನ್ನು ದಾರಿಹೋಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry