ಸೋಮವಾರ, ಮೇ 17, 2021
23 °C

ಪಾಕ್ ವಿಮಾನ ಹಠಾತ್ ಭೂಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಪ್ರಯಾಣಿಕನೊಬ್ಬನ ಅಪಹರಣದ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಂತರರಾಷ್ಟ್ರೀಯ ಸೇವೆಯ ವಿಮಾನವೊಂದು ಕರಾಚಿ ನಿಲ್ದಾಣದಲ್ಲಿ ಶುಕ್ರವಾರ ತುರ್ತಾಗಿ ಭೂಸ್ಪರ್ಶ ಮಾಡಬೇಕಾಯಿತು.

ಕರಾಚಿಯಿಂದ ಪಂಜಾಬ್ ಪ್ರಾಂತ್ಯದ ಬಹವಲಪುರಗೆ ತೆರಳುತ್ತಿದ್ದ ಪಿಕೆ-586 ವಿಮಾನವನ್ನು ಅಪಹರಿಸುವುದಾಗಿ ಪ್ರಯಾಣಿಕ ಬೆದರಿಕೆ ಹಾಕಿದ್ದ.ಇಲ್ಲಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡುತ್ತಿದ್ದಂತೆಯೇ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಗಗನಸಖಿಯೊಂದಿಗೆ ಜಗಳವಾಡಿದ್ದ ಈ ಪ್ರಯಾಣಿಕ, ವಿಮಾನ ಅಪಹರಿಸುವ ಉದ್ದೇಶವೇನೂ ಇರಲಿಲ್ಲ ಎಂದು ನಂತರ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.