ಪಾಕ್ ವಿರುದ್ದ ಸಾವಿರ ರನ್ ಪೂರೈಸಿದ ಸೆಹ್ವಾಗ್, ದೋನಿ

7

ಪಾಕ್ ವಿರುದ್ದ ಸಾವಿರ ರನ್ ಪೂರೈಸಿದ ಸೆಹ್ವಾಗ್, ದೋನಿ

Published:
Updated:
ಪಾಕ್ ವಿರುದ್ದ ಸಾವಿರ ರನ್ ಪೂರೈಸಿದ ಸೆಹ್ವಾಗ್, ದೋನಿ

ಮೊಹಾಲಿ (ಐಎಎನ್ಎಸ್): ಪಾಕಿಸ್ತಾನ ವಿರುದ್ದ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಮಹೇಂದ್ರ ಸಿಂಗ್ ದೋನಿ  ಅವರು ಬುಧವಾರ ಸಾವಿರ ರನ್ ಪೂರೈಸಿದರು.ಭಾರತ ಪಾಕ್ ನಡುವಣದ ಸೆಮಿಫೈನಲ್ ಪಂದ್ಯದ 2ನೇ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಪಾಕ್ ವಿರುದ್ದ ಸಾವಿರ ರನ್ ಪೂರೈಸಿದ ಆಟಗಾರರ ಸಾಲಿಗೆ ಸೆಹ್ವಾಗ್ ಅವರು ಸೇರಿದರು.

31 ವರ್ಷ ವಯಸ್ಸಿನ ಸೆಹ್ವಾಗ್ ಅವರು ಪಾಕ್ ಎದರು ಸಾವಿರ ರನ್ ಸೇರಿಸಿದ 6 ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ಯುವರಾಜ್ ಸಿಂಗ್ ಈಗಾಗಲೇ ಪಾಕ್ ವಿರುದ್ದ ಸಾವಿರ ರನ್ ಸೇರಿಸಿದ್ದಾರೆ.

ನಂತರ ಕಣಕ್ಕಿಳಿದ ನಾಯಕ ಮಹೇಂದ್ರ ಸಿಂಗ್ ದೋನಿ ಅವರು 42 ಓವರ್ ನಲ್ಲಿ ಸಾವಿರ ರನ್ ಪೂರೈಸಿದ ಶ್ರೇಯಕ್ಕೆ ಪಾತ್ರರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry