ಶುಕ್ರವಾರ, ಮೇ 20, 2022
26 °C

ಪಾಕ್ ವಿಷಯದಲ್ಲಿ ಪ್ರಧಾನಿ ಏಕಾಂಗಿ: ವಿಕಿಲೀಕ್ಸ್‌ನಿಂದ ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ- ಪಾಕಿಸ್ತಾನದ ಮಾತುಕತೆಯಲ್ಲಿ ಪ್ರಧಾನಿ ಪಾತ್ರ, ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಾಬ್ ಬಗ್ಗೆ ಇಸ್ಲಾಮಾಬಾದ್ ನಿಲುವು. ಈ ಕುರಿತು ಭಾರತದ ಅನಿಸಿಕೆ ಇತ್ಯಾದಿ ಕುರಿತ ಹಲವು ವಿಷಯಗಳನ್ನು ವಿಕಿಲೀಕ್ಸ್ ವೆಬ್‌ಸೈಟ್ ಬಹಿರಂಗಪಡಿಸಿದೆ.ಅಮೆರಿಕದ ರಾಯಭಾರ ಕಚೇರಿಗೆ ಸಂಬಂಧಿಸಿದಂತೆ ವಿಕಿಲೀಕ್ಸ್‌ಗೆ ಸೋರಿಕೆಯಾಗಿರುವ ಈ ವಿಷಯಗಳ ವಿವರ ಇಲ್ಲಿದೆ:ಪಾಕಿಸ್ತಾನದ ಜೊತೆಗಿನ ಮಾತುಕತೆ ವಿಷಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಸರ್ಕಾರದೊಳಗೆ ಏಕಾಂಗಿಯಾಗಿದ್ದಾರೆ ಎಂದು ಅಮೆರಿಕದ ಇಲ್ಲಿನ ರಾಯಭಾರಿ ತಮ್ಮ ವಿದೇಶಾಂಗ ಇಲಾಖೆಗೆ ತಿಳಿಸಿದ್ದರು. 2006ರಲ್ಲಿ ಪೆಟ್ರೋಲಿಯಂ ಸಚಿವ ಸ್ಥಾನದಿಂದ ಮಣಿಶಂಕರ್ ಅಯ್ಯರ್ ಅವರನ್ನು ತೆಗೆದುಹಾಕುವಲ್ಲಿ ಅಮೆರಿಕದ ಪರ ನಿಲುವು ಕೆಲಸ ಮಾಡಿದೆ ಎಂದು ಸಹ ಅವರು ಹೇಳಿದ್ದರು.2009ರ ಆಗಸ್ಟ್‌ನಲ್ಲಿ ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಇಲಾಖೆಗೆ ಸಂದೇಶ ರವಾನಿಸಿದ್ದ ಅಮೆರಿಕದ ರಾಯಭಾರಿ ಟಿಮತಿ ರೋಮರ್, ‘ನಾರಾಯಣನ್ ಅವರು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ತಮ್ಮ ನಾಯಕನಿಗಿಂತ ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.