ಮಂಗಳವಾರ, ಮೇ 11, 2021
19 °C

ಪಾಕ್ ವ್ಯಂಗ್ಯಚಿತ್ರಕಾರನಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಘದ 2011 ನೇ ಸಾಲಿನ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆಯ ತೀರ್ಪು ಪ್ರಕಟವಾಗಿದೆ. ಸ್ಪರ್ಧೆಯ ರಾಜಕೀಯ ವ್ಯಂಗ್ಯಚಿತ್ರ ವಿಭಾಗದ ಪ್ರಥಮ ಬಹುಮಾನಕ್ಕೆ ಪಾಕಿಸ್ತಾನದ ದಿ ಎಕ್ಸ್‌ಪ್ರೆಸ್ ಟ್ರಿಬ್ಯುನಲ್‌ನ ವ್ಯಂಗ್ಯಚಿತ್ರಕಾರ ಮಹಮ್ಮದ್ ಜಾವೂರ್ ಅವರ ವ್ಯಂಗ್ಯಚಿತ್ರ ಆಯ್ಕೆ ಮಾಡಲಾಗಿದೆ.ಚೆನ್ನೈನ ಮೀಡಿಯಾ ವಾಯ್ಸ ಪತ್ರಿಕೆಯ ಕಲಾವಿದ ಕೆ.ಎನ್.ಬಲರಾಜ್ ಹಾಗೂ ನವದೆಹಲಿಯ ಎಕನಾಮಿಕ್ಸ್ ಕ್ರಾನಿಕಲ್‌ನ ಕಲಾವಿದ ಸಜಿತ್ ಕುಮಾರ್ ಅವರ ವ್ಯಂಗ್ಯಚಿತ್ರಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ. ಪ್ರಥಮ ಬಹುಮಾನವು 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಮತ್ತು ತೃತೀಯ ಬಹುಮಾನ ಐದು ಸಾವಿರ ರೂ. ನಗದು ಪುರಸ್ಕಾರ ಹೊಂದಿದೆ.ಉದಯೋನ್ಮುಖ ವ್ಯಂಗ್ಯಚಿತ್ರಕಾರರ ವಿಭಾಗದಲ್ಲಿ ಬೆಂಗಳೂರಿನ ಸಿದ್ಧಾರ್ಥ್ ಅಚ್ಚಯ್ಯ ಅವರ ಕೃತಿಗೆ 10 ಸಾವಿರ ರೂ. ನಗದು ಪುರಸ್ಕಾರ ಹಾಗೂ ತೀರ್ಪುಗಾರರ ವಿಶೇಷ ಪುರಸ್ಕಾರ ಪುಣೆಯ ಕಪಿಲ್ ಘೋಲಾಪ್ ಅವರ ಕೃತಿಗೆ ಸಂದಿದೆ. ರಾಜಕೀಯ ವ್ಯಂಗ್ಯಚಿತ್ರ ವಿಭಾಗದ ಸಮಾಧಾನಕರ ಬಹುಮಾನಕ್ಕೆ ಮಂಗಳೂರಿನ ಸತೀಶ್ ಆಚಾರ್ಯ, ಮಣಿಪುರದ ಇಂಪಾಲ್‌ನ ಮಾನಸ್ ಮೈಸ್ನಮ್ ಅವರ ವ್ಯಂಗ್ಯಚಿತ್ರಗಳು ಆಯ್ಕೆಯಾಗಿವೆ.ಸಾಹಿತಿ ಗಿರೀಶ್ ಕಾರ್ನಾಡ್, ಕಲಾವಿದ ಎಸ್.ಜಿ.ವಾಸುದೇವ್ ಮತ್ತು ಬಿ.ಜಿ.ಗುಜ್ಜಾರಪ್ಪ ತೀರ್ಪುಗಾರರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.