ಪಾಕ್ ಸಂಸದೀಯ ನಿಯೋಗದ ಭೇಟಿ

7

ಪಾಕ್ ಸಂಸದೀಯ ನಿಯೋಗದ ಭೇಟಿ

Published:
Updated:

ನವದೆಹಲಿ (ಪಿಟಿಐ):  ಪಾಕಿಸ್ತಾನ ಸಂಸತ್ತಿನ ಅಧ್ಯಕ್ಷ ಸೈಯದ್ ನಯ್ಯರ್ ಹುಸೇನ್ ಅವರ ನೇತೃತ್ವದ  ಸಂಸದೀಯ ನಿಯೋಗವು ಗುರುವಾರ ಸಂಸತ್ ಭವನಕ್ಕೆ ಭೇಟಿ ನೀಡಿತು. ಅವರನ್ನು ಉಭಯ ಸದನಗಳ ಸದಸ್ಯರು ಸ್ವಾಗತಿಸಿದರು.ಮೊದಲು ಲೋಕಸಭೆಗೆ ಆಗಮಿಸಿದ ನಿಯೋಗವು ಕಲಾಪ ವೀಕ್ಷಿಸಿತು. ನಂತರ ನಿಯೋಗವು ರಾಜ್ಯಸಭೆಯ ಕಲಾಪವನ್ನೂ ವೀಕ್ಷಿಸಿತು.ಮಲಿಕ್ ಪ್ರವಾಸ ಮುಂದೂಡಿಕೆ: ವೀಸಾ ನಿಯಮಗಳ ಸರಳೀಕರಣ ಸಂಬಂಧ ಮಾತುಕತೆ ನಡೆಸಲು ಇದೇ 11ರಂದು ಭಾರತಕ್ಕೆ ಭೇಟಿ ನೀಡಬೇಕಿದ್ದ ಪಾಕಿಸ್ತಾನ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ತಮ್ಮ ಪ್ರವಾಸ ಮುಂದೂಡಿದ್ದಾರೆ.ಡಿ.11ರಿಂದ 13ರವರೆಗೆ ಭಾರತಕ್ಕೆ ಭೇಟಿ ನೀಡುವಂತೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಮಲಿಕ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ ತಾವು 14ರಂದು ಭಾರತಕ್ಕೆ ತೆರಳುವುದಾಗಿ ಮಲಿಕ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry