ಪಾಕ್ ಸಚಿವೆಗೆ ಮೊಬೈಲ್ ಕರೆ ಕೂಲಂಕಷ ತನಿಖೆ: ಐಜಿಪಿ

7

ಪಾಕ್ ಸಚಿವೆಗೆ ಮೊಬೈಲ್ ಕರೆ ಕೂಲಂಕಷ ತನಿಖೆ: ಐಜಿಪಿ

Published:
Updated:

ರಾಯಚೂರು: ಪಾಕಿಸ್ತಾನ ವಿದೇಶಾಂಗ ಖಾತೆ ಸಚಿವೆ ಹೀನಾ ರಬ್ಬಾನಿ ಅವರಿಗೆ ಜಿಲ್ಲೆಯ ಸಿಂಧನೂರಿನಿಂದ ಕರೆ ಮಾಡಿದ ಮೊಬೈಲ್ ಸಂಖ್ಯೆಯ ಪರಿಶೀಲನೆ ನಡೆಸಲಾಗುತ್ತಿದೆ. ಸಿಂಧನೂರಿನ ಅಮರೇಶ ಬುದ್ದಿನ್ನಿ ಎಂಬುವವರ ಮೊಬೈಲ್ ಅನ್ನು ಕರೆಗೆ ಬಳಕೆ ಮಾಡಿರುವುದು ನೆಟ್‌ವರ್ಕ್ ಡಯಲ್‌ನಿಂದ ಗೊತ್ತಾಗಿದೆ.ಇನ್ಯಾರಾದರೂ ಈ ಮೊಬೈಲ್ ಬಳಸಿ ಕರೆ ಮಾಡಿರಬಹುದೇ ಎಂಬುದರ ಕುರಿತು ಕೂಲಂಕಷ ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಲಯದ ಐ.ಜಿ.ಪಿ. ಮಹಮ್ಮದ್ ವಜೀರ್ ಅಹಮ್ಮದ್ ಹೇಳಿದರು.ನಗರದ ಪಶ್ಚಿಮ ಪೊಲೀಸ್ ಠಾಣೆಗೆ ಅವರು ಸೋಮವಾರಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಂಧನೂರಿನ ಅಮರೇಶ ಬುದ್ದಿನ್ನಿ ಮೊಬೈಲ್‌ನಿಂದ ಕರೆ ಹೋಗಿದೆ. ಅಮರೇಶ್‌ಗೆ ಹಿಂದಿ ಮಾತನಾಡಲು ಬರುವುದಿಲ್ಲ. ಅವರು ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ. ಅವರು ಕರೆ ಮಾಡಿಲ್ಲ ಎಂದು  ಹೇಳಿದ್ದಾರೆ. ಅವರ ಮೊಬೈಲ್‌ನಿಂದ ಕರೆ ಅಚಾನಕ್ಕಾಗಿ ಹೇಗೋ ಹೋಗಿದೆಯೋ ಅಥವಾ ಅಮರೇಶ ಅವರ ಮೊಬೈಲ್ ಬಳಸಿ ಇನ್ಯಾರಾದರೂ ಕರೆ ಮಾಡಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry