ಬುಧವಾರ, ಅಕ್ಟೋಬರ್ 16, 2019
28 °C

ಪಾಕ್ ಸೇನೆ ಮೇಲೆ ದಾಳಿ ಇಲ್ಲ: ತಾಲಿಬಾನ್

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಸಂಘಟನೆಗಳು ಹೊಸ ಮಂಡಳಿಯೊಂದನ್ನು ರಚಿಸಿಕೊಂಡಿದ್ದು, ಪಾಕ್ ಸೇನೆಯ ಮೇಲೆ ದಾಳಿ ನಡೆಸದಿರಲು ನಿರ್ಧರಿಸಿವೆ. ಅಮೆರಿಕ ನೇತೃತ್ವದ ನ್ಯಾಟೊ ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಇದೇ ವೇಳೆ ಸ್ಪಷ್ಟಪಡಿಸಲಾಗಿದೆ.ಭೂಗತನಾಗಿರುವ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಸೂಚನೆಯಂತೆ ಆಘ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ತಾಲಿಬಾನ್ ಭಯೋತ್ಪಾದಕರು, ಪಾಕ್‌ನಲ್ಲಿರುವ ಇನ್ನಿತರ ಉಗ್ರರ ಸಂಘಟನೆಗಳನ್ನು ಸೇರಿಸಿಕೊಂಡು ಐದು ತಂಡಗಳನ್ನು ಒಳಗೊಂಡ `ಶುರಾ~ (ಮಂಡಳಿ) ರಚಿಸಿಕೊಂಡಿದ್ದಾರೆ.ಪಾಕ್ ಪಡೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದನ್ನು ಕೈಬಿಡಬೇಕು ಎಂದು ಮಂಡಳಿ ತೀರ್ಮಾನಿಸಿದ್ದು, ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ. ನ್ಯಾಟೊ ಪಡೆಗಳನ್ನು ಹಿಮ್ಮೆಟ್ಟಿಸುವ ಬಗ್ಗೆ ಗಮನ ನೀಡಲು ಮಂಡಳಿ ನಿರ್ಧರಿಸಿದೆ ಎಂದು ಮೂಲಗಳನ್ನು ಆಧರಿಸಿ ಪ್ರಮುಖ ದೈನಿಕವೊಂದು ವರದಿ ಮಾಡಿದೆ.

Post Comments (+)