ಮಂಗಳವಾರ, ನವೆಂಬರ್ 19, 2019
22 °C

ಪಾಟೀಲ್ ಚೇತರಿಕೆ

Published:
Updated:

ಬೆಂಗಳೂರು: ಗುಂಡೇಟಿನಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಸಿ.ಸಿ.ಪಾಟೀಲ್ ಆರೋಗ್ಯ ಸ್ಥಿರವಾಗಿದ್ದು, ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.`ಉದರದಲ್ಲಿ ರಕ್ತಸ್ರಾವ ಹಾಗೂ ಕರುಳಿನ ಸೋಂಕು ಕಂಡುಬಂದಿದ್ದರಿಂದ ಹೆಚ್ಚಿನ ನಿಗಾವಹಿಸಲಾಗಿದೆ. ಯಾವುದೇ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯ ಕಂಡುಬಂದಿಲ್ಲ. ಇನ್ನೆರೆಡು ದಿನಗಳ ಕಾಲ ತೀವ್ರನಿಗಾ ಘಟಕದಲ್ಲಿ ಉಳಿಯಲಿದ್ದಾರೆ' ಎಂದು ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಸುದರ್ಶನ ಬಲ್ಲಾಳ್ `ಪ್ರಜಾವಾಣಿ'ಗೆ ತಿಳಿಸಿದರು.   `ಆರೋಗ್ಯ ವಿಚಾರಿಸಲು ಆಗಮಿಸಿದ್ದ ಗೃಹ ಸಚಿವ ಆರ್.ಅಶೋಕ್ ಮತ್ತು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಶಾಸಕರು ಮಾತನಾಡಿದ್ದು, ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)