ಶುಕ್ರವಾರ, ಮೇ 14, 2021
31 °C

ಪಾಠಕ್ಕಾಗಿ ವಿದ್ಯಾರ್ಥಿಗಳು ಮೈದಾನಕ್ಕೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇದು ಯಾವುದೋ ಹಳ್ಳಿಯ ಶಾಲೆಯ ಸ್ಥಿತಿ ಅಲ್ಲ. ವಿದ್ಯಾ ಕಾಶಿ ಎಂಬ ಖ್ಯಾತಿ ಪಡೆದಿರುವ ಧಾರ ವಾಡದಲ್ಲಿಯೂ ಸಹ ಕಟ್ಟಡದ ಕೊರತೆ ಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆಕಾಶವೇ ಸೂರು, ಮೈದಾನವೇ ಬೆಂಚು.ಇದು ಅಂತಿಂಥ ಕಾಲೇಜು ಅಲ್ಲ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಎಲ್ಲ `ಇಲ್ಲ~ವುಗಳ ನಡುವೆ ಈ ಕಾಲೇಜು ಆರಂಭವಾಗಿದೆ. ಅದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಇಲ್ಲಿನ ವಿದ್ಯಾರ್ಥಿಗಳಿಗೆ ಕೊಠಡಿಯೇ ಇಲ್ಲ. ಮೈದಾನದಲ್ಲಿ ಪಾಠ ಕೇಳುವ ಪರಿಸ್ಥಿತಿ ಈಗ ಬಂದೊದಗಿದೆ.ಸರ್ಕಾರಿ ಕಾಲೇಜು ಆರಂಭವಾಗಿ ಎರಡು ವರ್ಷಗಳಾದರೂ ಇನ್ನೂವರೆಗೆ ಸರಿಯಾದ ಕಟ್ಟಡವಿಲ್ಲ. ವಿದ್ಯಾಭವನ ದಲ್ಲಿ ಆರಂಭಗೊಂಡ ಕಾಲೇಜು, ಈಗ ಪಾಠದ ಕೋಣೆಯನ್ನು ಯುನಿರ್ವಸಿಟಿ ಪಬ್ಲಿಕ್ ಶಾಲೆಯಲ್ಲಿ (ಯುಪಿಎಸ್) ಬಾಡಿಗೆಗೆ ಪಡೆದಿದೆ.

 

ಆದರೆ ಯುಪಿಎಸ್ ಶಾಲೆಯಲ್ಲಿ ಈಗ 8 ಮತ್ತು 9ನೇ ತರ ಗತಿ ಪರೀಕ್ಷೆಗಳು ನಡೆಯುತ್ತಿರುವು ದರಿಂದ ಕಾಲೇಜಿನ ಕಲಾ ವಿಭಾಗದ ಪ್ರಥಮ ವರ್ಷದ ಸಿ ವಿಭಾಗದ ವಿದ್ಯಾರ್ಥಿಗಳು ಬಯಲಿಗೆ ಬಂದಿದ್ದಾರೆ. 

ಶಾಲೆಯ ಮೈದಾನದಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಈ ವಿದ್ಯಾರ್ಥಿಗಳದ್ದು.ಆದರೆ ಕಲಾ ವಿಭಾ ಗದ ಎ ಮತ್ತು ಬಿ ವಿಭಾಗ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿ ಗಳಿಗೆ ಇದ್ಯಾವುದೇ ಸಮಸ್ಯೆ ಇಲ್ಲ. ಸಿ ವಿಭಾಗದಲ್ಲಿ ಸುಮಾರು 120 ವಿದ್ಯಾರ್ಥಿಗಳಿದ್ದು, ಅವರನ್ನು ಸಹ ಎ ಮತ್ತು ಬಿ ವಿಭಾಗಕ್ಕೆ ಹೋಗಿ ಪಾಠ ಕೇಳುವಂತೆ ಪ್ರಾಚಾರ್ಯರು ಹೇಳಿದ್ದಾರೆ. ಆದರೆ ಆ ಕೊಠಡಿಗಳು ಸಹ ಅಷ್ಟೇನು ದೊಡ್ಡವೇನಿಲ್ಲ.`ಬುಧವಾರದಿಂದ ಮೈದಾನದಲ್ಲಿ ಪಾಠ ಕೇಳುತ್ತಿದ್ದೇವೆ. ಅರ್ಥಶಾಸ್ತ್ರ ಹಾಗೂ ಕನ್ನಡ ವಿಷಯಗಳನ್ನು ಮೈದಾನದಲ್ಲಿಯೇ ಹೇಳಿಕೊಡಲಾ ಗುತ್ತಿದೆ. ಒಂದು ವಾರದವರೆಗೆ ಈ ಸಮಸ್ಯೆ ಇರಲಿದೆ~ ಎಂದು ಸಿ ವಿಭಾಗದ ವಿದ್ಯಾರ್ಥಿ ಮೋಮಿನ್ ಹೇಳುತ್ತಾರೆ.`ಒಂದು ವಾರದವರೆಗೆ ಕಾಲೇಜಿಗೆ ಬರಬೇಡಿ. ನಿಮಗೆ ಹಾಜರಾತಿ ನೀಡ ಲಾಗುವುದು. ಇಲ್ಲವಾದರೆ ಎ ಮತ್ತು ಬಿ ವಿಭಾಗದಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರಾಧ್ಯಾಪಕರು ಹೇಳಿದ್ದಾರೆ~ ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ವಿದ್ಯಾರ್ಥಿಗಳು ಹೇಳಿದರು.`ಕಾಲೇಜಿಗೆ ಕಟ್ಟಡದ ಸಮಸ್ಯೆ ಇತ್ತು. ಈಗ ಹೊಸ ಬಸ್ ನಿಲ್ದಾಣದ ಹತ್ತಿರ ಕುಮಾರೇಶ್ವರ ನಗರದಲ್ಲಿ 2.29 ಎಕರೆ ಜಾಗೆಯಲ್ಲಿ 1.49 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ವಾಗುತ್ತಿದೆ. ನೆಲ ಮಹಡಿಯಲ್ಲಿ ಈಗಾಗಲೇ 6 ಕೊಠಡಿಗಳು ನಿರ್ಮಾಣ ವಾಗಿದ್ದು, ವಿಜ್ಞಾನ ಪದವಿ ತರಗತಿಗಳು ಆರಂಭಿಸಲಾಗಿದೆ.ಸಧ್ಯದಲ್ಲಿಯೇ ಗ್ರಂಥಾಲಯ ಸಹ ಆರಂಭಿಸ ಲಾಗುವುದು. ಕಟ್ಟಡ ಕಾಮಗಾರಿ ಆರಂಭಿಸಿ ಒಂದು ವರ್ಷವಾದರೂ ಇನ್ನೂವರೆಗೆ ಪೂರ್ಣಗೊಂಡಿಲ್ಲ. ಆದ್ದ ರಿಂದ ಕೊಠಡಿಗಳ ಸಮಸ್ಯೆ ಇದೆ~ ಎಂದು ಪ್ರಾಚಾರ್ಯ ಪ್ರೊ. ಸಿ.ಪಿ.ಬಹ್ಮನಪಾಡ ಹೇಳಿದರು.`ಯುಪಿಎಸ್ ಶಾಲೆಯಲ್ಲಿ ಕೊಠಡಿ ಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಬಾಡಿ ಗೆಯ ಕರಾರಿನಂತೆ ಶಾಲೆ ಪರೀಕ್ಷೆ ಸಮಯದಲ್ಲಿ ಕೊಠಡಿಗಳನ್ನು ಬಿಟ್ಟು ಕೊಡಬೇಕು. ಆದ್ದರಿಂದ ನಮ್ಮ ವಿದ್ಯಾರ್ಥಿಗಳಿಗೆ ಕೊಠಡಿ ಇಲ್ಲದಂತಾ ಗಿದೆ. ಹೊಸ ಕಟ್ಟಡ ನಿರ್ಮಾಣ ಪೂರ್ಣ ವಾಗುವವರೆಗೂ ಸ್ವಲ್ಪ ಮಟ್ಟಿನ ಸಮಸ್ಯೆ ಇದೆ~ ಎಂದು ಪ್ರಾಚಾರ್ಯರು ಸಮಜಾ ಯಿಷಿ ನೀಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.