ಭಾನುವಾರ, ನವೆಂಬರ್ 17, 2019
29 °C

ಪಾಠ ಹೇಳುವ ಗೋಡೆ

Published:
Updated:

ಗುಬ್ಬಿ ತಾಲ್ಲೂಕು ಹಳೆ ಗುಬ್ಬಿ ಪ್ರಾಥಮಿಕ ಶಾಲೆಯ ಗೋಡೆ ಮೇಲಿನ ಚಿತ್ರಗಳು ಮಕ್ಕಳೊಟ್ಟಿಗೆ ಜನರಿಗೂ ಪಾಠ ಹೇಳುತ್ತವೆ. ಇವರು ಯಾರೆಂದು ಪ್ರಶ್ನಿಸುವುದನ್ನು ರೂಢಿಸುತ್ತದೆ. ಗೋಡೆ ಮೇಲೆ ಬರೆದ ಹಸಿರುಡುಗೆ ತೊಟ್ಟ ವನ್ಯ ಪರಿಸರ, ಪ್ರಾಣಿಗಳು, ಪಕ್ಷಿಗಳು, ಸಾಧನೆ ಹಾದಿಯನ್ನು ಕಟ್ಟಿದ ಮೇರು ವ್ಯಕ್ತಿಗಳ ಚಿತ್ರಗಳು ಓದುಗರನ್ನು ಮತ್ತು ನೋಡುಗರನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಕಲಿಕೆಗೆ ಎಳೆಯುತ್ತವೆ.ಖಾಲಿ ಗೋಡೆಗೆ ತುಣುಕಿನ ಚಿತ್ರಗಳು `ನೋಡಿ ಕಲಿ- ಮಾಡಿ ಕಲಿ~ ಎಂದು ಹೇಳುತ್ತವೆ. ದಾರಿಹೋಕರನ್ನು ಸ್ತಬ್ಧವಾಗಿಸಿ ಇವರ‌್ಯಾರೆಂದು ತಿಳಿಯುವ ಮಾತಿಗೊಂದಷ್ಟು ವಿರಾಮ ಹೇಳಿ ತರ್ಕಕ್ಕೆಳೆದು ಬುದ್ದಿಗೊಂದು ಕೆಲಸ ಕೊಡುವ ಚಿತ್ರಪಟಗಳು ಇಲ್ಲಿವೆ.ಅಕ್ಕಮಹಾದೇವಿ, ಶಂಕರ, ರಾಮಾನುಜ, ಮಾಧ್ವ, ಗಾಂಧೀಜಿ, ಅಂಬೇಡ್ಕರ್, ಅನಿಬೆಸೆಂಟ್, ಮೀರಾಬಾಯಿ ಸೇರಿದಂತೆ ಮಹಾಪುರುಷರ ಕಲ್ಪನಾ ಚಿತ್ರ. ಅವರ ಬದುಕು ಚಿಕ್ಕ ಮಕ್ಕಳ ಪಾಲಿಗೆ ಆದರ್ಶ. ಚಿತ್ರಪಟ ತೋರಿಸಿ ಒಳ ಪ್ರಪಂಚದಲ್ಲಿ ಅವರ ಬಗೆಗಿನ ಓದನ್ನು ಕಲಿಸಲು ಪ್ರೇರೇಪಿಸುತ್ತವೆ. ಹುಲಿ, ಮೊಲ, ಜಿಂಕೆ, ಗೂಬೆ, ನವಿಲು, ಗಿಳಿ ಇತರ ಪ್ರಾಣಿ ಪಕ್ಷಿಗಳು ಮಕ್ಕಳಿಗೆ ಪರಿಚಿತವಾಗಿ ಪುಸ್ತಕದಲ್ಲಿರುವುದು ಮಸ್ತಕಕ್ಕೆ ಹಚ್ಚಾಗಲು ಸಹಕಾರಿ.ಬಾ ಮರಳಿ ಶಾಲೆಗೆ, ಕೂಲಿಯಿಂದ ಶಾಲೆಗೆ, ಕುಣಿಯೋಣ ಬಾರಾ, ನಲಿ-ಕಲಿ, ಚಿಣ್ಣರ ಚುಕ್ಕಿ, ಚುಕ್ಕಿ ಚಿಣ್ಣ, ಕಡ್ಡಾಯ ಶಿಕ್ಷಣ ಹಕ್ಕು... ಸರ್ಕಾರ ತಂದ ಇತರ ಯೋಜನೆಗಳು ಸಾರ್ಥಕದ ಒಟ್ಟಿಗೆ ಮಕ್ಕಳು ಈ ಚಿತ್ರ ನೋಡಿದಾಗ ಇವರು ಯಾರು? ಎಂದು ಪ್ರಶ್ನಿಸುವ ಮನೋಭಾವ ರೂಢಿಸಿದೆ. ಕಲಾವಿದರ ಮೂಸೆಯಲ್ಲಿ ಅರಳಿದ ಚಿತ್ರಗಳು ಏನನ್ನಾದರೂ ಕಲಿಸಿವೆಯೇ? ಎಂದು ಊರಿನ ವಿದ್ಯಾರ್ಥಿಗಳನ್ನು ಕೇಳಿದರೆ `ಸರಾಗವಾಗಿ ಹೆಸರನ್ನು ಹೇಳಿ, ಚರಿತ್ರೆ ಬಿಚ್ಚಿಡುತ್ತಾರೆ~. ಇಷ್ಟಕ್ಕಾಗಿಯಲ್ಲವೆ ಸರ್ಕಾರ ಗೋಡೆ ಮೇಲೆ ಚಿತ್ರ ಬಿಡಿಸಿದ್ದು.

 

ಪ್ರತಿಕ್ರಿಯಿಸಿ (+)