ಪಾದಚಾರಿ ಮಾರ್ಗ ತೆರವುಗೊಳಿಸಿ

7

ಪಾದಚಾರಿ ಮಾರ್ಗ ತೆರವುಗೊಳಿಸಿ

Published:
Updated:

ರಾಜರಾಜೇಶ್ವರಿ ನಗರದ ರಸ್ತೆಯಲ್ಲಿ ಸ್ವಾಗತ ಕಮಾನಿನಿಂದ ಹಿಡಿದು ಜಯಣ್ಣ ವೃತ್ತದವರೆಗಿನ ಪುಟ್‌ಪಾತ್‌ನಲ್ಲಿ ಎಳನೀರು ಮಾರಾಟಗಾರರು ಹೆಚ್ಚಾಗಿದ್ದಾರೆ. ಫುಟ್‌ಪಾತ್‌ನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ.

 

ಅಷ್ಟೆ ಅಲ್ಲದೆ, ಪ್ರತಿದಿನವೂ ಗಂಟೆಗಟ್ಟಲೆ ಎಳನೀರಿನ ಲಾರಿಗಳು ಬಂದು ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.  ಸಾರ್ವಜನಿಕರು ನಡೆದಾಡಲೂ ಕಷ್ಟ ಪಡಬೇಕಾಗಿದೆ. ಪುಟ್‌ಪಾತ್ ಪಕ್ಕದ ಖಾಲಿ ಜಾಗಕ್ಕೆ ಎಳನೀರು ಮಾರಾಟಗಾರರು ಸ್ಥಳಾಂತರಗೊಳ್ಳಲಿ. ಪಾದಚಾರಿ ಮಾರ್ಗವನ್ನು ತೆರವುಗೊಳಿಸಲಿ.     ಸುಗಮ ಸಂಚಾರಕ್ಕೆ ಎಡೆ ಮಾಡಿಕೊಡಲಿ.

-ನಿವಾಸಿಗಳುಬಸ್ ನಿಲ್ದಾಣದ ಹೆಸರು ಬದಲಿಸಿ

ನಗರ ಸಾರಿಗೆ ಬಸ್ಸುಗಳಲ್ಲಿ 12 ಬಿ, 201, 201 ಎನ್, 210 ಪಿ, 501, 400 ಇನ್ನೂ ಅನೇಕ ಮಾರ್ಗಗಳಲ್ಲಿ ಕೇಂದ್ರ ಬಸ್ ನಿಲ್ದಾಣದಿಂದ, ಬನಶಂಕರಿಯಿಂದ, ಸಿಲ್ಕ್‌ಬೋರ್ಡ್‌ನಿಂದ, ಪದ್ಮನಾಭನಗರ, ಉತ್ತರಹಳ್ಳಿ ಮುಂತಾದ ಕಡೆಗೆ ಹೋಗುವ ಸಾರ್ವಜನಿಕರಿಗೆ ಬನಶಂಕರಿ 2ನೇ ಹಂತದಲ್ಲಿ ಬರುವ `ಇಂದಿರಾ ನರ್ಸಿಂಗ್ ಹೋಂ~ ಎಂಬ ನಿಲ್ದಾಣ ತುಂಬಾ ಚಿರಪರಿಚಿತವಾಗಿತ್ತು.

 

ಆದರೆ ಇತ್ತೀಚೆಗೆ ಇಂದಿರಾ ನರ್ಸಿಂಗ್ ಹೋಂ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ. ಅಲ್ಲೆಗ ಯಾವುದೇ ನರ್ಸಿಂಗ್ ಹೋಂ ಇಲ್ಲ. ಆದ ಕಾರಣ ಸದರಿ ಬಸ್ ನಿಲ್ದಾಣವನ್ನು - ಚನ್ನಮ್ಮ ಕೆರೆ (ಸಿ ಟ ಬಿಇಡಿ) ನಿಲ್ದಾಣವೆಂದು ನಾಮಕರಣ ಮಾಡುವುದು ಅತ್ಯಂತ ಸೂಕ್ತ.

 

ಬಡಾವಣೆಯ ನಿವಾಸಿಗಳ ಪರವಾಗಿ ಕೋರಿದ್ದರಿಂದ ಈಗಾಗಲೇ ಆ ಬಡಾವಣೆಯಲ್ಲಿ ಇರುವ ನಗರ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಪಾರ್ಕ್‌ಗೆ ಅಧಿಕೃತವಾಗಿ ಚನ್ನಮ್ಮಕೆರೆ ಎಂಬ ಹೆಸರಿನೊಂದಿಗೆ ಕರೆಯಲಾಗುತ್ತಿದೆ. ಈ ನಿಲ್ದಾಣವನ್ನೂ ಚನ್ನಮ್ಮ ಹೆಸರಿನಿಂದ ಕರೆಯಬಹುದಲ್ಲವೆ?

- ಎಂ. ಬಿ. ಪಾಟೀಲಮೇಘದೂತ ಕಾರ್ಡು ಬರಲಿ


ಕೇವಲ 25 ಪೈಸೆಗೆ ಬರುತ್ತಿದ್ದ `ಮೇಘದೂತ~ ಅಂಚೆ ಕಾರ್ಡು ಈಗ ಯಾವುದೇ ಅಂಚೆ ಕಚೇರಿಯಲ್ಲಿ ಸಿಗುತ್ತಿಲ್ಲ. ಪತ್ರಗಳನ್ನು ಬರೆಯುವ (ಬಳಸುವ) ಕೆಲವೇ ನಮ್ಮಂತಹವರು ಈ ಅಂಚೆ ಕಾರ್ಡಿಗಾಗಿ ತಡಕಾಡುವಂತಾಗಿದೆ. ಈಗಲಾದರೂ ಜಿ.ಪಿ.ಓ. ಅಂಚೆ ಕಚೇರಿ ಸುಲಭ ದರದಲ್ಲಿ ಸಿಗುವ ಮೇಘದೂತ ಅಂಚೆ ಕಾರ್ಡುಗಳನ್ನು ಒದಗಿಸಿಕೊಡಲಿ ಎಂಬ ಕೋರಿಕೆ.

- ಬಿ. ಎಸ್. ರಮೇಶ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry