ಮಂಗಳವಾರ, ನವೆಂಬರ್ 12, 2019
20 °C

ಪಾನಕ ಕುಡಿದ ಮಗು ಸಾವು

Published:
Updated:

ಬೆಂಗಳೂರು: ರಾಜಪೇಟೆ ಬಳಿಯ ವಾಲ್ಮೀಕಿನಗರದಲ್ಲಿನ ಬಂಡೆ ಗುಡಿಸಲು ಪ್ರದೇಶದಲ್ಲಿ ಶುಕ್ರವಾರ ರಾಮನವಮಿ ಹಬ್ಬದ ಪ್ರಯುಕ್ತ ದೇವಸ್ಥಾನವೊಂದರಲ್ಲಿ ಪಾನಕ ಹಾಗೂ ಮಜ್ಜಿಗೆ ಕುಡಿದ ಆರು ವರ್ಷದ ಮಗುವೊಂದು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಸ್ಥಳೀಯರು ಅಸ್ವಸ್ಥಗೊಂಡಿದ್ದಾರೆ.ಬಂಡೆ ಗುಡಿಸಲು ಪ್ರದೇಶದಲ್ಲಿ ವಾಸವಿರುವ ಮುರುಗನ್ ಮತ್ತು ಪರಮೇಶ್ವರಿ ದಂಪತಿಯ ಗಂಗಾ ಎಂಬ ಹೆಣ್ಣು ಮಗು ಸಾವನ್ನಪ್ಪಿದೆ. ಅಸ್ವಸ್ಥರಲ್ಲಿ ಸುಮಾರು 20 ಮಕ್ಕಳು, 15 ಮಹಿಳೆಯರು ಮತ್ತು 15 ಮಂದಿ ಪುರುಷರು ಇದ್ದಾರೆ ಎಂದು ಚಾಮರಾಜಪೇಟೆ ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)