ಭಾನುವಾರ, ಜೂನ್ 13, 2021
21 °C

ಪಾನಮತ್ತರಿಂದ ಎಎಸ್ಐ, ಚಾಲಕನ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಸ್ತಿನಲ್ಲಿದ್ದ ಎಲೆಕ್ಟ್ರಾ ನಿಕ್‌ ಸಿಟಿ ಠಾಣೆಯ ಎಎಸ್‌ಐ ನಾಗರಾಜ್‌ (52) ಮತ್ತು ಹೊಯ್ಸಳ ವಾಹನದ ಚಾಲಕ ಜಗದೀಶ್‌ (34) ಎಂಬುವರ ಮೇಲೆ  ಐದು ಮಂದಿ ಪಾನಮತ್ತ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ಎಇಸಿಎಸ್‌ ಲೇಔಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಎಇಸಿಎಸ್‌ ಲೇಔಟ್‌ನ ಮೈಡ್ರೀಮ್‌ ಬಾರ್‌ ಬಳಿ ಐದು ಮಂದಿ ಪಾನಮತ್ತರಾಗಿ ಜಗಳವಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ನಾಗರಾಜ್‌ ಹಾಗೂ ಜಗದೀಶ್‌ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಹೋಗಿದ್ದಾರೆ.ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದ ನಾಗರಾಜ್‌ ಅವರ ಮೇಲೆ ಮೊದಲು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಬಳಿಕ ನಾಗರಾಜ್‌ ಅವರ ರಕ್ಷಣೆಗೆ ಧಾವಿಸಿದ ಜಗದೀಶ್‌ ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಾಗರಾಜ್‌ ಮತ್ತು ಜಗದೀಶ್‌ ಅವರ ಮುಖಕ್ಕೆ ಮುಷ್ಠಿಯಿಂದ ಗುದ್ದಿರುವ ಕಿಡಿಗೇಡಿಗಳು ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾರೆ. ಮೂಗಿನ ಭಾಗಕ್ಕೆ ಪೆಟ್ಟುಬಿದ್ದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಿಬ್ಬಂದಿಯನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.