ಪಾಪದ ಹಣ ದೇವರೂ ಸ್ವೀಕರಿಸಲ್ಲ: ದೇಜಗೌ

ಸೋಮವಾರ, ಮೇ 27, 2019
27 °C

ಪಾಪದ ಹಣ ದೇವರೂ ಸ್ವೀಕರಿಸಲ್ಲ: ದೇಜಗೌ

Published:
Updated:

ಮೈಸೂರು: ಪಾಪದ ಹಣವನ್ನು ದೇವರೂ ಸ್ವೀಕರಿಸಲ್ಲ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ತಿರುಪತಿ ತಿಮ್ಮಪ್ಪನಿಗೆ ವಜ್ರದ ಕಿರೀಟ ತೊಡಿಸಿದವರು ಇವತ್ತು ಜೈಲಿಗೆ ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ದೇ. ಜವರೇಗೌಡ ಹೇಳಿದರು.`ದೇಶ, ರಾಜ್ಯಗಳನ್ನು ಕಟ್ಟಲು ಅದರ ಇತಿಹಾಸವನ್ನು ಸಮಗ್ರವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಪುಲಿಕೇಶಿ ಯಾರೆಂದು ಗೊತ್ತಿಲ್ಲದ ಹಲವರು ಇಂದು ಅಧಿಕಾರಿಗಳಾಗಿದ್ದಾರೆ. ಕರ್ನಾಟಕಕ್ಕೆ ಸಮೃದ್ಧವಾದ ಇತಿಹಾಸವಿದೆ. ಬಸವಣ್ಣ, ಕುವೆಂಪು ಅವರಂತಹ ಮಹನೀಯರ ನಾಡು ಇದು. ಅವರಿಬ್ಬರ ಸಾಹಿತ್ಯವನ್ನು ಎಲ್ಲರೂ ಓದಲೇಬೇಕು~ ಎಂದು ಅಭಿಪ್ರಾಯಪಟ್ಟರು.`ನಮ್ಮಲ್ಲಿ ಹಲವಾರು ಆಧಿಕಾರಿಗಳು ಅಧಿಕಾರ ಸಿಕ್ಕ ಕೂಡಲೇ ಸೋಮಾರಿಗಳಾಗುತ್ತಾರೆ. ಅಧ್ಯಯನದಿಂದ ವಿಮುಖರಾಗುತ್ತಾರೆ. ಇದು ಸರಿಯಲ್ಲ. ನಿರಂತರವಾಗಿ ಕಾರ್ಯ ನಿರ್ವಹಿಸುವುದರಿಂದ ಮಾತ್ರ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಯಾಗುತ್ತದೆ. ನನ್ನ ದೀರ್ಘಾಯುಷ್ಯದ ಗುಟ್ಟು ಕೂಡ ಇದೇ ಆಗಿದೆ~ ಎಂದರು.`ನಿವೃತ್ತರಾದವರೂ ಸಮಾಜದ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದಿಂದ ನಿವೃತ್ತಿ ವೇತನ ಪಡೆಯುವುದನ್ನು ಸಮಾಜದ ಒಳಿತಿಗೆ ಯಾಕೆ ವಿನಿಯೋಗಿಸಬಾರದು. ದೇಹದಲ್ಲಿ ಶಕ್ತಿಯಿದ್ದಾಗ ದುಡಿಯಬೇಕು. ಸರ್ಕಾರದ ಪೆನ್ಶನ್ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಎಷ್ಟರ ಮಟ್ಟಿಗೆ ಸರಿ~ ಎಂದು ಪ್ರಶ್ನಿಸಿದರು.`ಸ್ಥಳೀಯರೇ ಐಎಎಸ್ ಅಧಿಕಾರಿಗಳಾಗಬೇಕು. ಇದರಿಂದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಹೊರಗಿನವರಿಗೆ ಇಲ್ಲಿಯ ಭಾಷೆ, ನೆಲ, ಜಲದ ಬಗ್ಗೆ ಹೆಚ್ಚು ಮಾಹಿತಿ ಗೊತ್ತಿರುವುದಿಲ್ಲ. ಕೆಎಎಸ್ ಅಧಿಕಾರಿಗಳನ್ನೇ ಐಎಎಸ್ ಆಗಿ ಮಾಡುವುದನ್ನು ಕಡ್ಡಾಯಗೊಳಿಸಬೇಕು~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry