ಪಾಪ್ ಗಾಯಕಿ ಶಕೀರಾ ಪಾರು

7

ಪಾಪ್ ಗಾಯಕಿ ಶಕೀರಾ ಪಾರು

Published:
Updated:

ಲಂಡನ್ (ಪಿಟಿಐ): ಕೊಲಂಬಿಯಾದ ಪಾಪ್ ತಾರೆ ಶಕೀರಾ, ಕಡಲ ಸಿಂಹದ ಭೀಕರ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಯಕಿಯ ಸಹೋದರ ಟೋನಿ ಸಕಾಲದಲ್ಲಿ ಧೈರ್ಯದಿಂದ ಮುನ್ನುಗ್ಗಿ ಸಹೋದರಿಯನ್ನು ಜೀವಾಪಾಯದಿಂದ ರಕ್ಷಿಸಿದ್ದಾರೆ.35ರ ಪ್ರಾಯದ ಶಕೀರಾ ಮತ್ತಿತರರ ತಂಡ ಪ್ರವಾಸದಲ್ಲಿದ್ದು, ಈ ವೇಳೆ ಶಕೀರಾ ಬಂಡೆಯೊಂದರ ಮೇಲೆ ನಿಂತು ಬ್ಲ್ಯಾಕ್‌ಬೆರಿ ಮೊಬೈಲ್‌ನಿಂದ ಸಮೀಪದಲ್ಲಿದ್ದ ಕಡಲ ಸಿಂಹಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರು.ಆದರೆ ಬ್ಲ್ಯಾಕ್ ಬೆರ‌್ರಿ ಮೊಬೈಲನ್ನು ಮೀನು ಎಂದು ಭಾವಿಸಿದ ಕಡಲ ಸಿಂಹ  ಶಕೀರಾ ಅವರೆಡೆಗೆ ಹಠಾತ್ತನೆ ಎರಗಿತು ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry