ಪಾರಂಪರಿಕ ಕಟ್ಟಡಗಳ ಸಮೀಕ್ಷೆಗೆ ಒಪ್ಪಂದ

7

ಪಾರಂಪರಿಕ ಕಟ್ಟಡಗಳ ಸಮೀಕ್ಷೆಗೆ ಒಪ್ಪಂದ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಪಾರಂಪರಿಕ, ಸಾಂಸ್ಕೃತಿಕ ಹಿನ್ನೆಲೆ­ಯುಳ್ಳ ಕಟ್ಟಡಗಳ ಸಮೀಕ್ಷೆ ಹಾಗೂ ಅಭಿವೃದ್ಧಿ­ಪಡಿಸುವ ಬಗ್ಗೆ ಯೋಜನೆ ರೂಪಿಸಲು ಭಾರತೀಯ ಪಾರಂಪರಿಕ ನಗರಗಳ ಜಾಲ (ಐಎಚ್‌ಸಿಎನ್‌) ಸಂಸ್ಥೆ­ಯೊಂ­ದಿಗೆ ಸೋಮ­ವಾರ ಒಪ್ಪಂದ ಮಾಡಿ­ಕೊಂಡಿದೆ.ಪಾರಂಪರಿಕ ಕಟ್ಟಡಗಳ  ಸಮೀಕ್ಷೆ ನಡೆಸಿ ಸಂರಕ್ಷಿಸಲು ತೀರ್ಮಾ­ನಿಸ­ಲಾಗಿದ್ದು, ಐಎಚ್‌ಸಿಎನ್‌ ಜತೆಗೆ ಒಪ್ಪಂದ ಮಾಡಿ­ಕೊಳ್ಳಲಾಗಿದೆ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ತಿಳಿಸಿದರು.ಐಎಚ್‌ಸಿಎನ್‌ ಮುಖ್ಯಸ್ಥರಾದ ರಾತಿ ವಿನಯ್ ಝಾ ಮಾತನಾಡಿ, ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಸಂಸ್ಥೆಯನ್ನು ಯುನೆಸ್ಕೊ ಸಂಸ್ಥೆ ಸಹ ಗುರುತಿಸಿದೆ ಎಂದು ಹೇಳಿದರು.ಬಿಬಿಎಂಪಿ ಪರವಾಗಿ ವಿಶೇಷ ಆಯುಕ್ತ (ಯೋಜನೆ) ವಿ.ಯಶವಂತ್ ಹಾಗೂ ಐಎಚ್‌ಸಿಎನ್‌ ಸಂಸ್ಥೆಯ ಪರವಾಗಿ ರಾತಿ ವಿನಯ್ ಝಾ ಒಪ್ಪಂದಕ್ಕೆ ಸಹಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry