ಪಾರದರ್ಶಕತೆಗೆ ಅರ್ಥವಿದೆಯೇ?

7

ಪಾರದರ್ಶಕತೆಗೆ ಅರ್ಥವಿದೆಯೇ?

Published:
Updated:

ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಮಾಡುವ ಶೋಧನಾ ಸಮಿತಿಯಲ್ಲಿ ಸರ್ಕಾರದ ಅಥವಾ ರಾಜ್ಯಪಾಲರ ಪ್ರತಿನಿಧಿಗೆ ಅವಕಾಶ ಇರಬಾರದು ಎಂದು ಕೆಲವು ವಿಶ್ರಾಂತ ಕುಲಪತಿಗಳು ಈಚೆಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯೊಂದರಲ್ಲಿ ತಳೆದ ನಿಲುವು ಸ್ವಾಗತಾರ್ಹ.ಸರ್ಕಾರದ ಪ್ರತಿನಿಧಿಗಳ ಪ್ರಭಾವದಿಂದ ಆಯ್ಕೆಯಾಗುವ ಕುಲಪತಿ  ಮುಂದೆ ಸರ್ಕಾರದ ಮರ್ಜಿಯನ್ನು ಕಾಯುವ ಸಂದರ್ಭವೇ ಹೆಚ್ಚಾಗಿರುತ್ತದೆ. ದೈನಂದಿನ ಆಡಳಿತ, ಸಿಬ್ಬಂದಿ ನೇಮಕಾತಿ ಇತ್ಯಾದಿಗಳಲ್ಲಿ ಸರ್ಕಾರದ ಪ್ರತಿನಿಧಿಗಳು ಹಸ್ತಕ್ಷೇಪ ಮಾಡುವುದನ್ನು ತಳ್ಳಿ ಹಾಕುವಂತಿಲ್ಲ. ಜಾತಿ, ಹಣ, ರಾಜಕೀಯ ಒತ್ತಡ ಇತ್ಯಾದಿಗಳ ಪ್ರಭಾವದಿಂದ ಕುಲಪತಿಗಳಾಗಿ ಆಯ್ಕೆಯಾದ ಹಲವು ನಿದರ್ಶನಗಳಿವೆ. ಕೆಲವು ಕುಲಪತಿಗಳ ಕಾರ್ಯವೈಖರಿಯನ್ನು ಗಮನಿಸಿದರೆ ಅವರ ನೇಮಕಾತಿಯಲ್ಲಿ ಅರ್ಹತೆಗಿಂತ ಇತರ ವಿಷಯಗಳನ್ನು ಹೆಚ್ಚಾಗಿ ಕೆಲಸ ಮಾಡಿರುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತವೆ.ಶೈಕ್ಷಣಿಕ ಅರ್ಹತೆ ಇಲ್ಲದವರೂ ರಾಜಕೀಯ ಪ್ರಭಾವದಿಂದ ಕುಲಪತಿಗಳಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ. ಕೆಲವರ ಆಯ್ಕೆಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ. ಹೀಗಿರುವಾಗ ಕುಲಪತಿಗಳ ನೇಮಕಾತಿಯಲ್ಲಿ ಸರ್ಕಾರದ ಪ್ರಭಾವ ಅಥವಾ ಇನ್ನಿತರ ಹಸ್ತಕ್ಷೇಪವಿಲ್ಲದ ಪಾರದರ್ಶಕತೆಯನ್ನು ಹೇಗೆ ನಿರೀಕ್ಷಿಸಬಹುದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry