ಭಾನುವಾರ, ಮಾರ್ಚ್ 7, 2021
30 °C

ಪಾರ್ಕಿನ್‌ಸನ್ಸ್: ಬೆಂಬಲ-ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾರ್ಕಿನ್‌ಸನ್ಸ್: ಬೆಂಬಲ-ಜಾಗೃತಿ

ಪುರಾತನ ಭಾರತೀಯ ಕಾಲದಲ್ಲಿ ಕಂಪವಾತ ಎಂದು ಹೆಸರಿಸಲಾಗಿರುವ ಪಾರ್ಕಿನ್‌ಸನ್ಸ್ ರೋಗ ಕೇಂದ್ರ ನರ ವ್ಯವಸ್ಥೆ, ಅಂದರೆ ಮೆದುಳು ಹಂತ ಹಂತವಾಗಿ ನಾಶವಾಗುವ ರೋಗವಾಗಿದೆ. ಡಾ.ಜೇಮ್ಸ ಪಾರ್ಕಿನ್‌ಸನ್ ಈ ರೋಗದ ಕುರಿತು ವಿವರವಾಗಿ ತಿಳಿಸಿದ್ದು ಅವರ ಹುಟ್ಟುಹಬ್ಬದ ದಿನವಾದ ಏಪ್ರಿಲ್ 11 ರಂದು ಪ್ರತಿ ವರ್ಷ ವಿಶ್ವ ಪಾರ್ಕಿನ್‌ಸನ್ಸ್ ರೋಗದ ದಿನವಾಗಿ ಆಚರಿಸಲಾಗುತ್ತದೆ.ಈತ `ಆ್ಯನ್ ಎಸ್ಸೇ ಆನ್ ದಿ ಶೇಕಿಂಗ್ ಪಾಲ್ಸಿ~ ಎಂಬ ಸಣ್ಣ ಪ್ರಬಂಧವನ್ನು 1817ರಲ್ಲಿ ಪ್ರಕಟಿಸಿದ್ದ. ಇದಕ್ಕಾಗಿ ಆತ ತನ್ನ ಸ್ವಂತ ರೋಗಿಗಳಿಂದ ಸಂಗ್ರಹಿಸಿದ ಮಾಹಿತಿ ಹಾಗೂ ತನ್ನ ಕಿಟಕಿಯಿಂದ ಹೊರಗಡೆ ನಡೆಯುತ್ತಿರುವ ಜನರನ್ನು ಗಮನಿಸಿ ಪ್ರಬಂಧ ಸಿದ್ಧಪಡಿಸಿದ್ದ. ಅಂದಿನಿಂದ ಇಂದಿನವರೆಗೆ ಪಾರ್ಕಿನ್‌ಸನ್ಸ್ ರೋಗ ಎಂಬುದು ಎಲ್ಲರೂ ಗುರುತಿಸುವ ಹೆಸರಾಗಿದೆ.ಪಾರ್ಕಿನ್‌ಸನ್ಸ್ ರೋಗ ಕೈ ನಡಗುವುದು, ಬಾಗಿ ನಿಲ್ಲುವ ಶೈಲಿ, ದೈನಂದಿನ ಚಟುವಟಿಕೆಯಲ್ಲಿ ನಿಧಾನ, ಅಸಮತೋಲನದ ಜೊತೆಗೆ ಸೆಟೆದುಕೊಳ್ಳುವ ಅನುಭವವಾಗುವುದು ಇದರ ಲಕ್ಷಣಗಳಲ್ಲಿ ಸೇರಿದೆ. ಪಾರ್ಕಿನ್‌ಸನ್ಸ್ ರೋಗದಲ್ಲಿ ಚಲನೆಯ ಲಕ್ಷಣಗಳು ಪ್ರಮುಖವಾಗಿದ್ದರೂ ನಿದ್ದೆ, ಬಹಿರ್ದೆಶೆ ಅಭ್ಯಾಸಗಳು, ಹಸಿವು, ನಡವಳಿಕೆಯ ಬದಲಾವಣೆಗಳು ಮುಂತಾದ ಸಮಸ್ಯೆಗಳನ್ನು ಗುರುತಿಸಲಾಗಿದೆ.50ಕ್ಕೂ ಹೆಚ್ಚು ವಯಸ್ಸಾದ ಜನರಲ್ಲಿ ಇದು ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ ಇದು ಮುಂಚಿತವಾಗಿಯೂ ಕಾಣಿಸಿಕೊಂಡು ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಗಮನಾರ್ಹ ಪರಿಣಾಮವುಂಟು ಮಾಡಬಹುದು.

 

ರಕ್ತ ತಪಾಸಣೆ ಅಥವಾ ಇಮೇಜಿಂಗ್ ಮೂಲಕ ಸುಲಭವಾಗಿ ದೃಢಪಡಿಸಲಾಗುವ ಇತರೆ ರೋಗಗಳಂತೆ ಅಲ್ಲದೆ  ಈ ರೋಗವನ್ನು ದೃಢಪಡಿಸಲು ಯಾವುದೇ ಒಂದು ಪರೀಕ್ಷೆ ಇರುವುದಿಲ್ಲ. ವೈದ್ಯಕೀಯ ಇತಿಹಾಸ ಮತ್ತು ಪರೀಕ್ಷೆಗಳು ರೋಗನಿದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ಪಿಇಟಿ ಸ್ಕ್ಯಾನ್‌ಗಳನ್ನು ಬಳಸಿ ಪಾರ್ಕಿನ್‌ಸನ್ಸ್ ತೊಂದರೆಗಳ ರೋಗನಿದಾನ ಕೈಗೊಳ್ಳಲಾಗುತ್ತಿದೆ.ಪಾರ್ಕಿನ್‌ಸೋನಿಯನ್ ಮತ್ತು ಇತರೆ ಸಂಬಂಧಿತ ತೊಂದರೆಗಳಲ್ಲಿನ ಸಾಮಾನ್ಯ ಅಂಶಗಳಿಂದಾಗಿ ನರರೋಗ ಶಾಸ್ತ್ರದಲ್ಲಿ ವಿಶೇಷ ಉಪವಿಭಾಗವನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಕ್ಷೇತ್ರದಲ್ಲಿ ಪರಿಣತಿ ಪಡೆದ ವಿಶೇಷ ವೈದ್ಯರನ್ನು, ಚಲನೆ ತೊಂದರೆಗಳ ವಿಶೇಷಜ್ಞ (ಮೂವ್‌ಮೆಂಟ್ ಡಿಸಾರ್ಡರ್ ಸ್ಪೆಷಲಿಸ್ಟ್) ನರರೋಗತಜ್ಞ ಎನ್ನಲಾಗುತ್ತದೆ.ಇತರೆ ಬಹುತೇಕ ಹಂತ ಹಂತವಾಗಿ ನಾಶವಾಗುವಂತಹ ರೋಗಗಳಂತಲ್ಲದೆ ಪಾರ್ಕಿನ್‌ಸನ್ಸ್ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳು ಲಭ್ಯವಿರುವುದಿಲ್ಲ. ಪಾರ್ಕಿನ್‌ಸನ್ಸ್ ರೋಗಕ್ಕೆ ವಿಸ್ತಾರವಾದ ಚಿಕಿತ್ಸೆಗಳು ಇವೆ. ಅತ್ಯಂತ ಹೆಚ್ಚು ಗುರುತಿಸಲಾದ ಹಾಗೂ ಪ್ರಸ್ತುತ ಅತ್ಯುತ್ತಮ ಮಟ್ಟದ್ದಾಗಿ ಪರಿಗಣಿಸಲಾದ ಚಿಕಿತ್ಸೆ ಎಂದರೆ `ಲೇವಾಡೋಪಾ ಬಳಕೆಯಾಗಿದೆ.ಇದು ಪಾರ್ಕಿನ್‌ಸನ್ಸ್ ರೋಗದ ನಿರ್ವಹಣೆಯನ್ನು 1967ರಿಂದ ನಾಟಕೀಯವಾಗಿ ಬದಲಿಸಿದೆ.  ಪಾರ್ಕಿನ್‌ಸನ್ಸ್ ರೋಗ ಹೊಂದಿರುವ ರೋಗಿಗಳ ಜೀವನದ ಗುಣಮಟ್ಟವನ್ನು ಈ ಬದಲಾದ ವೈದ್ಯಕೀಯ ಚಿಕಿತ್ಸೆಯ ಸಾಧನ ಸಲಕರಣೆಗಳು ನಾಟಕೀಯವಾಗಿ ಸುಧಾರಿಸಿವೆ.ಜೊತೆಗೆ ಅವರು ಸಾಮಾನ್ಯ ಜೀವನದ ಶೈಲಿಯನ್ನು ಹೊಂದಲು  ಅವಕಾಶ ಮಾಡಿಕೊಡುತ್ತದೆ.  ಆದರೆ ಹಂತ ಹಂತವಾಗಿ ರೋಗ ಪ್ರಗತಿಯಾಗುತ್ತಿದ್ದಂತೆ ಲೇವಾಡೋಪಾದ ಪರಿಣಾಮಗಳು ಅದರ ದುಷ್ಪರಿಣಾಮಗಳಿಂದಾಗಿ ಸೀಮಿತವಾಗುತ್ತದೆ.ಈ ರೀತಿ ಮಧ್ಯಮ ಹಂತದ ಪಾರ್ಕಿನ್‌ಸನ್ಸ್ ರೋಗದಲ್ಲಿ ಶಸ್ತ್ರಕ್ರಿಯಾ ಆಯ್ಕೆಗಳು ಜೀವನಮಟ್ಟವನ್ನು ನಾಟಕೀಯವಾಗಿ ಸುಧಾರಿಸುವಲ್ಲಿ ಸಹಾಯಕವಾಗಿವೆ. ಪ್ರಸ್ತುತ `ಡೀಪ್ ಬ್ರೇನ್ ಸ್ಟಿಮ್ಯೂಲೇಷನ್~ ಅಂದರೆ ಡಿಬಿಎಸ್ ಉನ್ನತ ಪಾರ್ಕಿನ್‌ಸನ್ಸ್ ರೋಗದಲ್ಲಿ ನೆಚ್ಚಿನ ಆಯ್ಕೆಯ ಶಸ್ತ್ರಕ್ರಿಯಾ ಚಿಕಿತ್ಸೆಯಾಗಿದೆ.ಆಕರಕೋಶ ಚಿಕಿತ್ಸೆ!

ಡಿಬಿಎಸ್ ವಿಶೇಷ ನರರೋಗ ಶಸ್ತ್ರಚಿಕಿತ್ಸಾ ತಜ್ಞರು(ಫಂಕ್ಷನಲ್ ಮತ್ತು ಸ್ಟಿರಿಯೋ ಟ್ಯಾಕ್ಟಿಕ್ ನರರೋಗ ಶಸ್ತ್ರಚಿಕಿತ್ಸಾ ತಜ್ಞರು) ನಡೆಸುವ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಾಗಿದೆ. ಇತರೆ ಶಸ್ತ್ರಕ್ರಿಯಾ ಕ್ರಮಗಳಂತಲ್ಲದೆ ತಾಂತ್ರಿಕವಾಗಿ ತಿರುಗುಮುರುಗಾಗಬಹುದಾದಂತಹ ಶಸ್ತ್ರಚಿಕಿತ್ಸೆ ಈ ಡಿಬಿಎಸ್ ಆಗಿರುತ್ತದೆ.ಪಾರ್ಕಿನ್‌ಸನ್ಸ್ ರೋಗಕ್ಕಾಗಿ ಪ್ರತಿವರ್ಷ ಹೊಸ ಹೊಸ ಔಷಧಗಳನ್ನು ಸೇರಿಸಲಾಗುತ್ತಿದೆ. ಹಾಗೂ ಸಂಪೂರ್ಣ ಗುಣಮುಖಗೊಳಿಸುವುದಕ್ಕಾಗಿ ಕೋಟ್ಯಂತರ ಡಾಲರ್‌ಗಳನ್ನು ವೆಚ್ಚ ಮಾಡಲಾಗುತ್ತಿದೆ. ಪಾರ್ಕಿನ್‌ಸನ್ಸ್ ರೋಗಕ್ಕಾಗಿ ಆಕರಕೋಶ ಚಿಕಿತ್ಸೆಯನ್ನು ಬಳಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.ಬಹುತೇಕ ದೇಶಗಳಲ್ಲಿ ಪಾರ್ಕಿನ್‌ಸನ್ಸ್ ರೋಗಿಗಳು ಮತ್ತು ಅವರ ಆರೈಕೆ ಮಾಡುವವರಿಗೆ ಸಹಾಯ ಮಾಡಲು ಹಲವಾರು ವೇದಿಕೆಗಳು ಮತ್ತು ಬೆಂಬಲ ಸಮೂಹಗಳು ಇವೆ. ಏಪ್ರಿಲ್ 11ನ್ನು ವಿಶ್ವ ಪಾರ್ಕಿನ್‌ಸನ್ಸ್ ದಿನವಾಗಿ ಆಚರಿಸಿ ಈ ರೋಗ ಕುರಿತು ಜಾಗೃತಿ ಹರಡುವುದಲ್ಲದೆ ಪಾರ್ಕಿನ್‌ಸನ್ಸ್ ರೋಗ ಹೊಂದಿರುವ ರೋಗಿಗಳು ಮತ್ತು ಅವರ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಲಾಗುತ್ತಿದೆ. ನಿರ್ದಿಷ್ಟ ರೀತಿಯ `ಟುಲಿಪ್~ ಹೂವಿಗೆ ಡಾಕ್ಟರ್ ಜೇಮ್ಸ ಪಾರ್ಕಿನ್‌ಸನ್ ಎಂದು 1981ರಲ್ಲಿ ಈ ಹೂವನ್ನು ಅಭಿವೃದ್ಧಿಪಡಿಸಿದ ಹಾಗೂ ಪಾರ್ಕಿನ್‌ಸನ್ಸ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಹೆಸರಿಸಿದ್ದಾನೆ. 2005ರಿಂದ ಈ ಕೆಂಪು ಟುಲಿಪ್ ಡಾಕ್ಟರ್ ಜೇಮ್ಸ ಪಾರ್ಕಿನ್‌ಸನ್‌ನ್ನು ರೋಗದ ಜಾಗೃತಿ ಹರಡುವ ಸ್ಮರಣಾರ್ಥ ಚಿಹ್ನೆಯನ್ನಾಗಿ ಬಳಸಲಾಗುತ್ತಿದೆ.ಬನ್ನಿ. ಡಾ. ಜೇಮ್ಸ ಪಾರ್ಕಿನ್‌ಸನ್ ಅವರ 257ನೇ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ನಾವೆಲ್ಲರೂ ಪಾರ್ಕಿನ್‌ಸನ್ಸ್ ರೋಗಿಗಳಿಗೆ ಬೆಂಬಲ ನೀಡುವುದಲ್ಲದೆ ಈ ರೋಗ ಕುರಿತು ಜಾಗೃತಿಯನ್ನು ಹರಡೋಣ.

(ಲೇಖಕರು  ಸಲಹಾಕಾರರು, ನರರೋಗ ತಜ್ಞರು, ಪಾರ್ಕಿನ್‌ಸನ್ಸ್ ರೋಗ ಮತ್ತು ಇತರೆ ಚಲನೆಯ ತೊಂದರೆಗಳ ವಿಶೇಷತಜ್ಞರು-ದೂರವಾಣಿ

94834 00000)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.